



ಕಾರ್ಕಳ:- ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಭಾರತೀಯ ಜನತಾ ಪಕ್ಷ ಕಾರ್ಕಳ ಮಂಡಲ ಎಸ್. ಸಿ. ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆಯು ಸಚಿವರಾದ ವಿ. ಸುನೀಲ್ ಕುಮಾರ್‌ರವರ ವಿಕಾಸ ಕಛೇರಿಯಲ್ಲಿ ನಡೆಯಿತು. ಕಾರ್ಕಳ ಮಂಡಲ ಅಧ್ಯಕ್ಷರಾದ ಶ್ರೀ ಮಹಾವೀರ್ ಹೆಗ್ಡೆ, ಜಿಲ್ಲಾ ಎಸ್. ಸಿ. ಮೋರ್ರ‍್ಚಾ ಅಧ್ಯಕ್ಷರಾದ ಎನ್. ಬಿ. ಬಾಬು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾಚನೆ ಮಾಡುವ ಮೂಲಕ ಕಾಯ೯ಕ್ರಮವನ್ನು ಉದ್ಘಾಟಿಸಿ, ಸಭೆಯಲ್ಲಿ ಸೇವೆ ಹಾಗೂ ಸ್ಮರಣೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂಧರ್ಭದಲ್ಲಿ ಎಸ್. ಸಿ. ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಜಿಲ್ಲಾ ಎಸ್. ಸಿ. ಮೋರ್ಚಾ ಅಧ್ಯಕ್ಷರಾದ ಗೋಪಾಲ ಕಳಂಜೆ, ಜಿಲ್ಲಾ ಎಸ್. ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಸದಾನಂದ, ಮಂಡಲ ಎಸ್. ಸಿ. ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಕ್ತಿಕೇಂದ್ರ ಎಸ್. ಸಿ. ಮೋರ್ಚಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಲಾಯಿತು. ಕ್ಷೇತಾಧ್ಯಕ್ಷರಾದ ಮಹಾವೀರ್ ಹೆಗ್ಡೆಯವರು ಎಸ್.ಸಿ. ಮೋರ್ಚಾ ತಾಲೂಕಿನ ಉಸ್ತುವಾರಿಯಾಗಿ ಶ್ರೀನಿವಾಸ್ ಕಾರ್ಲ ಇವರನ್ನು ಘೋಷಿಸಿದರು, ಕೃಷ್ಣ ಪಳ್ಳಿ ವರದಿ ಮಂಡಿಸಿದರು. ಎನ್. ಬಿ. ಬಾಬು ಸ್ವಾಗತಿಸಿ, ಪ್ರಸನ್ನ ಕಾರ್ಲ ವಂದಾನಾರ್ಪಣೆ ಗೈದರು ಸತೀಶ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.