logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ ಜಿಲ್ಲೆಯಲ್ಲಿ ಬಿಜೆಪಿಗೆ 5ಕ್ಕೆ 5 ಗೆಲುವು

ಟ್ರೆಂಡಿಂಗ್
share whatsappshare facebookshare telegram
13 May 2023
post image

ಉಡುಪಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ -2023 ಕ್ಕೆ ಸಂಬಂಧಿಸಿದಂತೆ ಇಂದು ನಡೆದ ಮತ ಎಣಿಕೆಯಲ್ಲಿ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿ.ಜೆ.ಪಿ ಪಕ್ಷವು ಗೆಲುವು ಸಾಧಿಸಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು 98,628 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 16,153 ಮತಗಳ ಅಂತರದಿAದ ಜಯಗಳಿಸಿರುತ್ತಾರೆ. ಗೋಪಾಲ ಪೂಜಾರಿ ಅವರು 82,475 ಮತಗಳನ್ನು ಪಡೆದಿರುತ್ತಾರೆ. ಉಳಿದಂತೆ ಜೆ.ಡಿ.ಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ 841, ಆಮ್ ಆದ್ಮಿ ಪಕ್ಷದ ಸಿ.ಎ ರಮಾನಂದ ಪ್ರಭು 187, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್ ಎಸ್ 626, ರಾಷ್ಟ್ರೀಯ ಸಮಾಜದಳ (ಆರ್) ಪಕ್ಷದ ಕೊಲ್ಲೂರು ಮಂಜುನಾಥ ನಾಯಕ್ 171, ಪಕ್ಷೇತರ ಅಭ್ಯರ್ಥಿಗಳಾದ ಜಿ. ಚಂದ್ರಶೇಖರ  613, ಬಿ. ಶ್ಯಾಮ 296 ಹಾಗೂ ಬಿ.ಹೆಚ್ ಸುರೇಶ್ ಪೂಜಾರಿ ಅವರು 638 ಮತಗಳನ್ನು ಪಡೆದಿರುತ್ತಾರೆ. 1,208 ನೋಟಾ ಮತದಾನವಾಗಿರುತ್ತದೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರು, 1,02,424 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 41,556 ಮತಗಳ ಅಂತರದಿAದ ಜಯಗಳಿಸಿರುತ್ತಾರೆ. ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು 60,868 ಮತಗಳನ್ನು ಪಡೆದಿರುತ್ತಾರೆ. ಇನ್ನುಳಿದಂತೆ ಜೆ.ಡಿ.ಎಸ್ ಅಭ್ಯರ್ಥಿ ರಮೇಶ್ 1,053, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ 1,257 ಹಾಗೂ ಪಕ್ಷೇತರ ಅಭ್ಯರ್ಥಿ ಜಿ. ಚಂದ್ರಶೇಖರ್ 728 ಮತಗಳನ್ನು ಪಡೆದಿರುತ್ತಾರೆ. ಒಟ್ಟು 1,141 ನೋಟಾ ಮತಗಳು ಚಲಾವಣೆಯಾಗಿರುತ್ತದೆ.

ಉಡುಪಿ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಅವರು 97,079 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಿಂತ 32,776, ಮತಗಳ ಅಂತರದಿAದ ಜಯಗಳಿಸಿರುತ್ತಾರೆ. ಪ್ರಸಾದ್ ಕಾಂಚನ್ ಅವರು ಒಟ್ಟು 64,303 ಮತಗಳನ್ನು ಪಡೆದಿರುತ್ತಾರೆ. ಜೆ.ಡಿ.ಎಸ್ ಅಭ್ಯರ್ಥಿ ದಕ್ಷತ್ ಆರ್ ಶೆಟ್ಟಿ  845, ಆಮ್ ಆದಿ ಪಕ್ಷದ ಪ್ರಭಾಕರ ಪೂಜಾರಿ 640, ಉತ್ತಮ ಪ್ರಜಾಕೀಯ ಪಕ್ಷದ ನಿತಿನ್ ವಿ ಪೂಜಾರಿ 1119, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ರಾಮದಾಸ್ ಭಟ್ 323 ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಶೇಖರ್ ಹಾವಂಜೆ 435 ಮತಗಳನ್ನು ಪಡೆದಿರುತ್ತಾರೆ. 1316 ನೋಟಾ ಮತಗಳನ್ನು ಚಲಾಯಿಸಲಾಗಿರುತ್ತದೆ.

ಕಾಪು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು 80,559 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಿಂತ 13,004 ಮತಗಳ ಅಂತರಂದ ಜಯಗಳಿಸಿರುತ್ತಾರೆ. ವಿನಯ್ ಕುಮಾರ್ ಸೊರಕೆ ಅವರು 67,555 ಮತಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಸಬಿನಾ ಸಮದ್ 568, ಆಮ್ ಆದ್ಮಿ ಪಕ್ಷದ ಎಸ್. ಆರ್ ಲೋಬೋ 252 ಹಾಗೂ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಹಮ್ಮದ್ ಹನೀಫ್ 1,616 ಮತಗಳನ್ನು ಪಡೆದಿದ್ದು, ಕಾಪು ಕ್ಷೇತ್ರದಲ್ಲಿ ಒಟ್ಟು 805 ನೋಟಾ ಮತಗಳನ್ನು ಮತದಾರರು ಚಲಾಯಿಸಿರುತ್ತಾರೆ.            ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಅವರು 77,028    ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಿಂತ 4,602 ಮತಗಳ ಅಂತರದಿAದ ಜಯಗಳಿಸಿರುತ್ತಾರೆ. ಉದಯ್ ಶೆಟ್ಟಿ ಮುನಿಯಾಲು ಅವರು 72,426 ಮತಗಳನ್ನು ಪಡೆದಿರುತ್ತಾರೆ. ಉಳಿದಂತೆ ಆಮ್ ಆದ್ಮಿ ಪಕ್ಷದ ಡೇನಿಯಲ್ ಫೆಡ್ರಿಕ್ ರೆಂಜರ್ 556, ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಶ್ರೀಕಾಂತ್ ಪೂಜಾರಿ 281, ಪಕ್ಷೇತರ ಅಭ್ಯರ್ಥಿಗಳಾದ ಪ್ರಮೋದ್ ಮುತಾಲಿಕ್ 4,508, ಅರುಣ್ ದೀಪಕ್ ಮೆಂಡೋನ್ಸಾ 501, ಡಾ. ಮಮತಾ ಹೆಗ್ಡೆ 238, ವಿದ್ಯಾಲಕ್ಷ್ಮಿ 151 ಹಾಗೂ ಸುಧಾಕರ ಆಚಾರ್ಯ ಅವರು 233 ಮತಗಳನ್ನು ಪಡೆದಿದ್ದು, 921 ನೋಟಾ ಮತದಾನವಾಗಿರುತ್ತದೆ. 

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.