logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದಿಂದ ಪೌರ ಕಾರ್ಮಿಕರಿಗೆ ಸನ್ಮಾನ

ಟ್ರೆಂಡಿಂಗ್
share whatsappshare facebookshare telegram
2 May 2024
post image

ಕಾರ್ಕಳ : ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಟೈಗರ್ಸ್ ಆಶ್ರಯದಲ್ಲಿ ಕಾರ್ಕಳ ಪುರಸಭೆಯಲ್ಲಿ ಹಲವಾರು ವರ್ಷಗಳಿಂದ ಸೇವೆಗೆಯ್ಯುತ್ತಿರುವ ಪೌರ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಕಾರ್ಕಳದ ಉದ್ಯಮಿ, ಬೋಳ ಪ್ರಶಾಂತ್ ಕಾಮತ್ ಅವರು ನೆರವೇರಿಸಿದರು ಕಾರ್ಮಿಕ ದಿನಾಚಣೆ ಅಂಗವಾಗಿ ಕಾರ್ಕಳದ ಸಾಲ್ಮರ ಬಳಿಯ ಪ್ರಶಾಂತ್ ವಿಹಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸುಮಾರು 37 ಮಂದಿಯನ್ನು ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಮಿಕರ ದಿನವಾದ ಇಂದು ಕಾರ್ಮಿಕರನ್ನು ಗೌರವಿಸುವುದು ಪುಣ್ಯ ಹಾಗೂ ಗೌರವದ ಕೆಲಸವಾಗಿದೆ. ಈ ಕಾರ್ಮಿಕರು ನಮಗಾಗಿ ಸ್ವಚ್ಚತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಮಿಕರನ್ನು ಗುರುತಿಸುವಂತಹ ಕೆಲಸಗಳು ಸಮಾಜದಲ್ಲಿ ನಡೆಯಬೇಕು ಮುಂದಿನ ದಿನಗಳಲ್ಲಿ ಬಡವರು, ಅಶಕ್ತರು ಹಾಗೂ ಅಂಗವಿಕಲರಿಗಾಗಿ ಬೇರೆ ಬೇರೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತದೆ ಎಂದರು ಸಮಾಜ ಸೇವಕಿ ರಮಿತ ಶೈಲೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು ಸನ್ಮಾನಿತರ ಪರವಾಗಿ ಸುದೇಶ್ ರಾವ್ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಕಾರ್ಕಳ ಪುರಸಭಾ ಸದಸ್ಯ ಅವಿನಾಶ್ ಶೆಟ್ಟಿ, ಮಾಜಿ ಸದಸ್ಯ ಪ್ರಕಾಶ್ ರಾವ್, ಬಿಜೆಪಿ ಮುಖಂಡ ಅನಂತ ಕೃಷ್ಣ ಶೆಣೈ, ಉದ್ಯಮಿಗಳಾದ ಹರೀಶ್ ಆಚಾರ್ಯ, ಪ್ರಕಾಶ್ ಶೆಣೈ, ಪ್ರದೀಪ್ ಆಚಾರ್ಯ ಶೃಂಗಾರ, ಹರೀಶ್ ಅಮೀನ್, ಗುರುಪ್ರಸಾದ್ ನಾರಾವಿ, ಸಂತೋಷ್ ಬೆಳ್ಮಣ್, ರಾಜೇಶ್ ಬೆಳ್ಮಣ್, ಕವಿತಾ ಹರೀಶ್ ಪ್ರವೀಣ್ ಕುಲಾಲ್ ರವಿ ಶೆಟ್ಟಿ, ಸುದೀಪ್ ಇನ್ನಿತರ ಹಲವಾರು ಮಂದಿ ಭಾಗವಹಿಸಿ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಿದ್ದಾರೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.