



ಮುಂಬೈ: ಬಾಲಿವುಡ್ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್ (66) ನಿಧನಹೊಂದಿದ್ದಾರೆ. ನಿರ್ದೇಶಕ ಹಾಗೂ ಹಾಸ್ಯ ನಟರಾಗಿ ಸತೀಶ್ ಕೌಶಿಕ್ ಗುರುತಿಸಿಕೊಂಡಿದ್ದರು.
ಮೂಲತ: ಹರ್ಯಾಣದ ಮಹೇಂದ್ರ ಗಢದವರಾಗಿರುವ ಸತೀಶ್ ಕೌಶಿಕ್ ಹಿಂದಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನಾ ಕೌಶಲ್ಯಕ್ಕೆ ಖ್ಯಾತಿಪಡೆದಿದ್ದರು. ಅತ್ಯುತ್ತಮ ಹಾಸ್ಯ ನಟನೆಗಾಗಿ ಎರಡು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆಿದಿದ್ದರು.
ಮಿಸ್ಟರ್ ಇಂಡಿಯಾದ ಕ್ಯಾಲೆಂಡರ್ ಪಾತ್ರದ ಮೂಲಕ ಸತೀಶ್ ಕೌಶಿಕ್ ಎಲ್ಲರ ಗಮನ ಸೆಳೆದಿದ್ದರು. ದೀವಾನಾ ಮಸ್ತಾನಾ ಚಿತ್ರದಲ್ಲಿ ಸತೀಶ್ ಕೌಶಿ್ಕ್ ನಿರ್ವಹಿಸಿದ್ದ ಪಪ್ಪು ಪೇಜರ್ ಪಾತ್ರ ಮೆಚ್ಚುಗೆ ಗಳಿಸಿತ್ತು.
ರೂಪ್ ಕಿ ರಾಣಿ ಚೋರೋನ್ ಕಾ ರಾಜಾ ಸತೀಶ್ ಕೌಶಿಕ್ ನಿರ್ದೇಶಿಸಿದ್ದ ಮೊದಲ ಚಿತ್ರವಾಗಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.