ಮುಂಬೈ: ಇಂದು ಬೆಳಗಿನ ಜಾವ ಸುಮಾರು 2.30 ಕ್ಕೆ ಮನೆಗೆ ಕಳ್ಳತನದ ಉದ್ದೇಶದಿಂದ ನುಗ್ಗಿದ ಎಂದು ಆರೋಪಿಸಲಾಗುತ್ತಿರುವ ವ್ಯಕ್ತಿಯಿಂದ ಹಲ್ಲೆಗೊಳಗಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಆಪರೇಷನ್ ಗಳು ನಡೆದಿದ್ದು ಆರೋಗ್ಯ ಸ್ಥಿರವಾಗಿದೆ ಮತ್ತು ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಸಿಓಓ ಡಾ ಉತ್ತಮಣಿ ಹೇಳಿದ್ದಾರೆ. ಸೈಫ್ ಅವರಿಗೆ ಚಾಕು ಇರಿತದ ಒಟ್ಟು 6 ಗಾಯಗಳಾಗಿದ್ದು ಅದರಲ್ಲಿ ಎರಡು ಚಿಕ್ಕ ಪ್ರಮಾಣದವು, ಎರಡು ಮಧ್ಯಂತರ ಮತ್ತು ಉಳಿದೆರಡು ಆಳವಾದ ಗಾಯಗಳು, ಅವರ ಬೆನ್ನಿಂದ ಸುಮಾರು ಎರಡೂವರೆ ಇಂಚು ಉದ್ದವಿರುವ ಚಾಕುವಿನ ತುಂಡನ್ನು ಸರ್ಜರಿ ಮೂಲಕ ತೆಗೆಯಲಾಗಿದೆ ಎಂದು ವೈದ್ಯ ಹೇಳಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.