logo
WhatsApp Image 2026-04-02 at 14.46.04.jpeg
hindalco everlast.jpeg

ಉದ್ಯಮಿ ವಿರುದ್ಧ‌ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ, ಪೊಲೀಸರಿಗೆ ದೂರು

ಟ್ರೆಂಡಿಂಗ್
share whatsappshare facebookshare telegram
17 Apr 2023
post image

ಮುಂಬೈ: ಉದ್ಯಮಿಯೊಬ್ಬರ ವಿರುದ್ಧ ಬಾಲಿವುಡ್ ನಟಿ, ವಿವಾದಿತ ತಾರೆ ಶೆರ್ಲಿನ್ ಚೋಪ್ರಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.ಉದ್ಯಮಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. ವಿಡಿಯೋ ಆಲ್ಬಂ ಮಾಡೋಣ ಎಂದು ಹೇಳಿಕೊಂಡು ಬಂದ ವ್ಯಕ್ತಿ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಚೋಪ್ರಾ ದೂರಿನಲ್ಲಿ ಹೇಳಿದ್ದಾರೆ.

ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ ಎನ್ನುವವರು ಸದ್ಯ ದುಬೈನಲ್ಲಿದ್ದಾರೆ. ಶೆರ್ಲಿನ್ ಜತೆ ಆಲ್ಬಂ ಸಾಂಗ್ ಮಾಡುವುದಕ್ಕಾಗಿಯೇ ದುಬೈನಿಂದ ಬಂದಿದ್ದೇನೆ ಎಂದು ಹೇಳಿಕೊಂಡು ಹೋಟೆಲ್‌ಗೆ ಕರೆಸಿಕೊಂಡಿದ್ದಾರೆ. ಮಾತುಕತೆಯ ನಂತರ ತನ್ನ ಬಳಿ ಕಾರಿಲ್ಲ, ಹಾಗಾಗಿ ಶೆರ್ಲಿನ್‌ಗೆ ಬಳಿ ಡ್ರಾಪ್ ಕೇಳಿದ್ದಾರೆ. ಶೆರ್ಲಿನ್ ತಮ್ಮ ಮನೆಗೆ ಮೊದಲು ಡ್ರಾಪ್ ಮಾಡಿಸಿಕೊಂಡು, ಆಮೇಲೆ ಉದ್ಯಮಿಯನ್ನು ಬಿಟ್ಟು ಬರಲು ಡ್ರೈವರ್‌ಗೆ ಸೂಚಿಸಿದ್ದಾರೆ.ಶೆರ್ಲಿನ್ ಮನೆ ಬರುತ್ತಿದ್ದಂತೆಯೇ ‘ನಿಮ್ಮ ಮನೆ ನೋಡಬಹುದಾ?’ ಎಂದು ಕೇಳಿದನಂತೆ ಆ ಉದ್ಯಮಿ. ಮನೆ ನೋಡಲು ಹೋದ ಉದ್ಯಮಿ ಅಲ್ಲಿಯೇ ಊಟ ಮಾಡಿದ್ದಾನೆ.

ನಂತರ ನೀನು ಸಖತ್ ಹಾಟ್ ಆಗಿ ಕಾಣ್ತಿದ್ದೀಯಾ, ನನ್ನಿಂದ ಕಂಟ್ರೋಲ್ ಮಾಡ್ಕೊಳ್ಳೋಕೆ ಆಗ್ತಿಲ್ಲ ಎಂದು ಕಿರುಕುಳ ಶುರು ಮಾಡಿದ್ದಾನೆ ಎಂದು ಚೋಪ್ರಾ ದೂರಿದ್ದಾರೆ.ಹೇಗೋ ಅಲ್ಲಿಂದ ಉದ್ಯಮಿಯನ್ನು‌ ಮನೆಯಿಂದ ಕಳುಹಿಸಿದರೂ ಜಾರ್ಜರ್ ಕೇಳುವ ನೆಪದಲ್ಲಿ ಮತ್ತೆ ಬಂದು ಕಿರುಕುಳ ನೀಡಿದನಂತೆ.ನಟಿಯ ದೂರಿನನ್ವಯ ಆ ಉದ್ಯಮಿಯ ವಿರುದ್ಧ ಜುಹಾ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 354, 506, 509ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.