logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಬಾಲಿವುಡ್ ನ ಹಿರಿಯ ನಟ, ʼಖೋಪ್ಡಿʼ ಖ್ಯಾತಿಯ ಸಮೀರ್ ಖಾಕರ್ ನಿಧನ

ಟ್ರೆಂಡಿಂಗ್
share whatsappshare facebookshare telegram
15 Mar 2023
post image

ಮುಂಬಯಿ: 80 ರ ದಶಕದಲ್ಲಿ ದೂರದರ್ಶನದಲ್ಲಿ ʼ ಖೋಪ್ಡಿʼ ಪಾತ್ರದಲ್ಲಿ ಮಿಂಚಿದ್ದ ಹಿರಿಯ ನಟ ಸಮೀರ್ ಖಾಕರ್ (71) ಮಂಗಳವಾರ ಮುಂಜಾನೆ ಮುಂಬಯಿಯಲ್ಲಿ ನಿಧನರಾಗಿದ್ದಾರೆ.

ಕಳೆದ 4 ದಶಕಗಳಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹತ್ತಾರು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಗುಜರಾತಿನ ನಾಟಕಗಳಿಂದ ಪಾತ್ರಗಳಿಗೆ ಬಣ್ಣ ಹಚ್ಚಿದ ಸಮೀರ್‌ ಆ ಬಳಿಕ ಕಿರುತೆರೆಯಿಂದ ಜನಪ್ರಿಯರಾದರು.

ʼಸರ್ಕಸ್ʼ, ʼನಯಾ ನುಕ್ಕಡ್ʼ, ʼಶ್ರೀಮಾನ್ ಶ್ರೀಮತಿʼ, ʼಮಣಿರಂಜನ್ʼ , ಅದಾಲತ್ʼ ನಂತರ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ʼಖೋಪ್ಡಿʼ ಎನ್ನುವ ಅವರ ಪಾತ್ರ 80 ದಶಕದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

ʼಹಸೀ ತೋ ಫಸೀʼ, ʼಪಟೇಲ್ ಕೋ ಪಂಜಾಬಿ ಶಾದಿʼ,ʼ ಪುಷ್ಪಕ್, ʼಪರಿಂದಾʼ, ʼಶಾಹೆನ್ಶಾʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ʼ ಫರ್ಜಿʼ, ʼ ಸುಧೀರ್ ಮಿಶ್ರಾ ಅವರ ʼಸೀರಿಯಸ್ ಮೆನ್ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಮೀರ್‌ ಅವರಿಗೆ ನಿನ್ನೆ ಮುಂಜಾನೆ ( ಮಂಗಳವಾರ) ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ಕೂಡಲೇ ವೈದ್ಯರನ್ನು ಕರೆಸಿ ಪರೀಕ್ಷಿಸಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಅವರು ಬುಧವಾರ ಬೆಳಗ್ಗೆ 4:30ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಸಮೀರ್ ಸಹೋದರ ಗಣೇಶ್ ʼಇಂಡಿಯನ್‌ ಎಕ್ಸ್‌ ಪ್ರೆಸ್‌ʼ ತಿಳಿಸಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.