



ಮಂಗಳೂರು: ಜೂನ್ 3 ಮತ್ತು 5ರಂದು ಬೊಂದೆಲ್ ಜಂಕ್ಷನ್‌ನಲ್ಲಿರುವ ಜಾನ್ಲಿನ್ ಕಾಟೇಜ್‌ನಲ್ಲಿ 20 ವರುಷಗಳಿಂದ ಲಾಫ್ಟರ್ ಕ್ಲಬ್‌ಗಳನ್ನು ನಡೆಸುತ್ತಿರುವ ಬೊಂದೆಲ್ ಲಾಫ್ಟರ್ ಕ್ಲಬ್ ಇವರು ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ಇದರ 100 ವಿದ್ಯಾರ್ಥಿಗಳಿಗೆ ಲಾಫ್ಟರ್ ಸೆಶನ್‌ಗಳನ್ನು ನಡೆಸಿದರು. ಬೊಂದೆಲ್ ಕ್ಲಬ್ಬಿನ ಸಂಸ್ಥಾಪಕ ಜಾನ್ ಬಿ. ಮೊಂತೇರೊ ಮತ್ತು ಕ್ಲಬ್ಬಿನ ಹಿರಿಯ ಸದಸ್ಯರಾದ ನಿವೃತ್ತ ಪ್ರಾಧ್ಯಾಪಕ ಖಾಲಿದ್ ಅನ್ಸಾರಿ ಮತ್ತು ಬೊನವೆಂಚರ್ ಡಿಸೋಜಾ ಇವರು ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಮಾರ್ಗದರ್ಶನ ನೀಡಿದರು. ಇದಕ್ಕೂ ಮುನ್ನ ಎಪ್ರಿಲ್ 4 ರಂದು ಜಾನ್ ಮೊಂತೇರೊ ಮತ್ತು ಪ್ರೊ| ಖಾಲಿದ್ ಅನ್ಸಾರಿ ಇವರನ್ನು ಬಲ್ಮಠ ಎ.ಜೆ. ಟರ‍್ಸ್ನ ಕಾಲೇಜು ಆವರಣದಲ್ಲಿ ಬೋಧಕರಿಗಾಗಿ ನಗೆ ಅಧಿವೇಶನವನ್ನು ನಡೆಸಲು ಆಹ್ವಾನಿಸಲಾಗಿತ್ತು. ಪ್ರಾಂಶುಪಾಲೆ ಡಾ| ಲರಿಸ್ಸಾ ಮಾರ್ಥಾ ಸ್ಯಾಮ್ಸ್ ಅವರ ಮಾರ್ಗದರ್ಶನದಲ್ಲಿ ಮಾನಸಿಕ ಆರೋಗ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಶ್ರೀರಂಜನಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.