



ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ವ್ಯಕ್ತಿಯೊಬ್ಬರಿಗೆ ಶೇರ್ ವ್ಯವಹಾರಕ್ಕೆ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬ್ರಹ್ಮಾವರದ ವ್ಯಕ್ತಿಯೋರ್ವರಿಗೆ ವಾಟ್ಸಪ್ ಹಾಗೂ ಫೇಸ್‌ಬುಕ್ ಮುಖಾಂತರ ಅಗಸ್ಟ್ 2023 ರಲ್ಲಿ ಆದಿತ್ಯ ಅಗರ್‌ವಾಲ್ ಹೆಸರಿನಲ್ಲಿ ಮತ್ತು ನಮ್ರತಾ ಎಂಬವರ ಹೆಸರಿನಲ್ಲಿ ಸಂದೇಶ ಕಳುಹಿಸಿ ವಾಟ್ಸಪ್ ಗ್ರೂಪ್ ನ ಮೂಲಕ ಶೇರು ವಹಿವಾಟು ಬಗ್ಗೆ ಶೇರ್ ಖರೀದಿ ಮಾಡುವಂತೆ ತರಬೇತಿ ನೀಡಿ, ಒತ್ತಾಯಪೂರ್ವಕವಾಗಿ ಆರೋಪಿಗಳು ಸೂಚಿಸಿದ ಶೇರ್ ಸಂಸ್ಥೆಗಳಿಗೆ ದಿನಾಂಕ 11/10/2023 ರಿಂದ ದಿನಾಂಕ 18/10/2023 ರ ಮಧ್ಯೆ ಖಾತೆಯಿಂದ ಆರೋಪಿತರು ನೀಡಿದ ಖಾತೆಗೆ ಒಟ್ಟು ರೂಪಾಯಿ 6,00,000/- ಹಣವನ್ನು ಪಡೆದುಕೊಂಡು ವಂಚಿಸಿರುವುದಾಗಿ ವಂಚನೆಗೊಳಗಾದ ಬ್ರಹ್ಮಾವರದ ವ್ಯಕ್ತಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.