logo
WhatsApp Image 2026-04-02 at 14.46.04.jpeg
hindalco everlast.jpeg

ಬ್ರಹ್ಮಾವರ: ಗೋಡಾನ್ ನಲ್ಲಿಟ್ಟಿದ್ದ 1.24 ಲಕ್ಷ ರೂ. ಮೌಲ್ಯದ 620 ಕೆ.ಜಿ. ಒಣ ಅಡಿಕೆ ಕಳವು

ಟ್ರೆಂಡಿಂಗ್
share whatsappshare facebookshare telegram
18 Aug 2022
post image

ಬ್ರಹ್ಮಾವರ: ಗೋಡಾನ್ ನಲ್ಲಿ ಶೇಖರಣೆ ಮಾಡಿಟ್ಟಿದ್ದ 1.24 ಲಕ್ಷ ರೂ. ಮೌಲ್ಯದ 620 ಕೆ.ಜಿ. ಒಣ ಅಡಿಕೆಯನ್ನು ಕಳವು ಮಾಡಿರುವ ಘಟನೆ ಬ್ರಹ್ಮಾವರ ತಾಲೂಕಿನ ಹಲುವಳ್ಳಿ ಗ್ರಾಮದ ಕಿನ್ ಮಾನ್ ಬೆಟ್ಟು ಎಂಬಲ್ಲಿ ನಡೆದಿದೆ. ಹಲುವಳ್ಳಿ ಗ್ರಾಮದ ಕಿನ್ ಮಾನ್ ಬೆಟ್ಟು ನಿವಾಸಿ ಸುಬ್ರಹ್ಮಣ್ಯ ಭಟ್ ಅವರ ಗೋಡಾನ್ ನಲ್ಲಿ ಕಳ್ಳತನ ಆಗಿದ್ದು, ಅವರು ಅಡಿಕೆಗಳನ್ನು ಒಣಗಿಸಿ ಗೋಡಾನ್ ನಲ್ಲಿ ಸಂಗ್ರಹಿಸಿಟ್ಟಿದ್ದರು. ಆದರೆ, ಗೋಡಾನ್ ನಲ್ಲಿದ್ದ ಅಡಿಕೆಗಳು ಕಡಿಮೆಯಾಗುತ್ತಾ ಬರುತ್ತಿದ್ದು, ಆ. 16ರಂದು ಸುಮಾರು 20 ಕೆಜಿಯಷ್ಟು ಒಣ ಅಡಿಕೆ ಕಳವಾಗಿರುವುದು ಗೊತ್ತಾಗಿದೆ. ಬಳಿಕ ಸರಿಯಾಗಿ ಪರಿಶೀಲನೆ ನಡೆಸಿದಾಗ ಎಪ್ರಿಲ್‌‌ ತಿಂಗಳಿನಿಂದ ಈವರೆಗೆ ಸುಮಾರು ಒಟ್ಟು 620 ಕೆಜಿಯಷ್ಟು ಒಣ ಅಡಿಕೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಕಳವಾದ ಅಡಿಕೆ ಅಂದಾಜು ಮೌಲ್ಯ 1,24 ಲಕ್ಷ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.