



ಬ್ರಹ್ಮಾವರ:
ಸ್ಕೂಲ್ ಬ್ಯಾಗ್ ನಲ್ಲಿ ಹಾಕಿ ಕಾರಿನ ಹಿಂಬದಿ ಸೀಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಬ್ರಹ್ಮಾವರದ ಹೊನ್ನಾಳದಲ್ಲಿ ನಡೆದಿದೆ. ಹೂಡೆಯ ಆಫ್ರೀನ್ ಬಾನು ಎಂಬವರು ಚಿನ್ನಾಭರಣ ಕಳೆದುಕೊಂಡ ಮಹಿಳೆ. ಇವರು ಜ. 28 ಮತ್ತು 29 ರಂದು ಹೊನ್ನಾಳದಲ್ಲಿ ಸಂಬಂಧಿಕರ ಮದುವೆಯ ಸಮಾರಂಭಕ್ಕೆ ತೆರಳಿದ್ದರು. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಜ.30ರಂದು ಹೂಡೆಯಲ್ಲಿರುವ ಗಂಡನ ಮನೆಗೆ ಹೊರಟಿದ್ದರು. ಮೈದುನ ಫರಾಜ್ ತೋನ್ಸೆ ಅವರನ್ನು ಬರಲು ಹೇಳಿದಂತೆ, ಅವರು ಮಾರುತಿ 800 ಕಾರನ್ನು ತಂದಿದ್ದರು. ಆಫ್ರೀನ್ ಅವರು ಮದುವೆಗೆಂದು ಲಾಕರ್‌ನಿಂದ ತಂದಿದ್ದ ನೂರಾ ಎಂಬತ್ತೂವರೆ ಗ್ರಾಂ ತೂಕದ ಚಿನ್ನಾಭರಣಗಳನ್ನು ಬೆನ್ನಿಗೆ ಹಾಕುವ ಸ್ಕೂಲ್ ಬ್ಯಾಗ್‌ನಲ್ಲಿರಿಸಿ, ಅದನ್ನು ಕಾರಿನ ಹಿಂಬದಿ ಸೀಟಿನಲ್ಲಿ ದೊಡ್ಡ ಲಗ್ಗೇಜ್ ಬ್ಯಾಗಿನ ಮೇಲಿಟ್ಟಿದ್ದರು. ಈ ವೇಳೆ ತಾಯಿ ಚಾ ಕುಡಿಯಲು ಕರೆದಿದ್ದು, ಆಗ ಆಫ್ರೀನ್ ಹಾಗೂ ಮೈದುನ ಮನೆಯೊಳಗೆ ಹೋಗಿ ಚಾ ಕುಡಿದು ಬಂದಿದ್ದರು. ಬಳಿಕ ಅಲ್ಲಿಂದ ಹೊರಟು ಹೊಡೆಗೆ ಬಂದು, ಲಾಗೇಜುಗಳನ್ನು ಮನೆಯೊಳಗಿಟ್ಟಿದ್ದರು. ಬಳಿಕ ಸಂಜೆ ಬ್ಯಾಗನ್ನು ಓಪನ್ ಮಾಡಿ ನೋಡಿದಾಗ ಅದರಲ್ಲಿಟ್ಟಿದ್ದ 7.26 ಲಕ್ಷ ರೂ. ಮೌಲ್ಯದ 180 ½ (ನೂರಾ ಎಂಬತ್ತೂವರೆ) ಗ್ರಾಂ ತೂಕದ ಚಿನ್ನಾಭರಣಗಳು ಕಾಣೆಯಾಗಿದ್ದವು. ಯಾರೋ ಕಳ್ಳರು ಕಾರಿನಲ್ಲಿ ಇರಿಸಿದ್ದ ಆಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.