



ಬ್ರಹ್ಮಾವರ; ಸಿಟಿ ಸೆಂಟರ್ ಎದುರುಗಡೆಯಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಯಾರೋ ಕಳ್ಳರು ಕಳವು ಮಾಡಿರುವ ಘಟನೆ ನ.28ರಂದು ಬೆಳಕಿಗೆ ಬಂದಿದೆ. ಮಟಪಾಡಿ ಗ್ರಾಮದ ಮೇಲ್ಮನೆ ನಿವಾಸಿ ವಿರೇಶ್ ಎಂಬವರು ನ.27ರಂದು ರಾತ್ರಿ 11:30ಕ್ಕೆ ತನ್ನ ಬೈಕ್ ಅನ್ನು ವಾರಂಬಳ್ಳಿ ಗ್ರಾಮದ ಸಿಟಿ ಸೆಂಟರ್ ಎದುರುಗಡೆಯಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಸಿಟಿ ಸೆಂಟರ್ ಒಳಗೆ ಇರುವ ಕುಂಕುಮ ಹಾಲ್‌ನಲ್ಲಿ ಡೆಕೋರೇಟ್ ಕೆಲಸ ಹೋಗಿದ್ದರು. ಮರುದಿನ ಬೆಳಿಗ್ಗೆ 8:30ಕ್ಕೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಬೈಕ್ ಮೌಲ್ಯ 35 ಸಾವಿರ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.