



ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಕೂಲಿ ಕಾರ್ಮಿಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಯಡ್ತಾಡಿಯಲ್ಲಿ ನಡೆದಿದೆ.
ಸಾವನ್ನಪ್ಪಿದ ಕೂಲಿ ಕಾರ್ಮಿಕ ಯಡ್ತಾಡಿ ನಿವಾಸಿ ಸಂತೋಷ (28) ಎಂದು ತಿಳಿಯಲಾಗಿದೆ
ಈತ ಕೂಲಿ ಕೆಲಸದ ಬಗ್ಗೆ ಶಿರ್ವ ಮಂಚಕಲ್ ಕಡೆಗೆ ಹೋಗಿದ್ದು ಅಲ್ಲಿಂದ ಅಪರಿಚಿತ ವ್ಯಕ್ತಿಯೋರ್ವರು ಜ.25ರಂದು ಕರೆ ಮಾಡಿ ಸಂತೋಷ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದರು. ಆಬಳಿಕ ಪರಿಚಿತರಾದ ವಿಜಯ್ ಎನ್ನುವವರು ಮೂರ್ನಾಲ್ಕು ಮಂದಿಯೊಂದಿಗೆ ಆ್ಯಂಬುಲೆನ್ಸ್‌ನಲ್ಲಿ ಮೃತದೇಹವನ್ನು ಮನೆಗೆ ತಂದು ಹೋಗಿದ್ದರು.
ಹೀಗಾಗಿ ಸಂತೋಷ್ ಅವರ ಮರಣದಲ್ಲಿ ಅನುಮಾನವಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಹೆತ್ತವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.