logo
WhatsApp Image 2026-04-02 at 14.46.04.jpeg
hindalco everlast.jpeg

ಬ್ರಹ್ಮಾವರ: ಕಲ್ಲುಕೋರೆಯ ಬಳಿ ಕುಸಿದುಬಿದ್ದು ವ್ಯಕ್ತಿ ಸಾವು

ಟ್ರೆಂಡಿಂಗ್
share whatsappshare facebookshare telegram
19 Nov 2022
post image

ಬ್ರಹ್ಮಾವರ: ಹೆಗ್ಗುಂಜೆ ಗ್ರಾಮದ ನಡೂರಿನ ಕಲ್ಲುಕೋರೆಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನ.17ರಂದು ಸಂಜೆ 6ಗಂಟೆಗೆ ನಡೆದಿದೆ. ಮೃತ ವ್ಯಕ್ತಿಯನ್ನು ನಡೂರು ನಿವಾಸಿ 38 ವರ್ಷದ ಪುಟ್ಟಯ್ಯ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ಮಾನಸಿಕ ಅಸ್ವಸ್ಥರಾಗಿದ್ದು, ವಿಪರೀತ ಮದ್ಯಸೇವನೆ ಮಾಡುತ್ತಿದ್ದರು. ಇವರು ಹೆಗ್ಗುಂಜೆಯಲ್ಲಿ ವಾಸವಾಗಿದ್ದು, ಆಗಾಗ ಹೆಂಡತಿಯ ಮನೆಗೆ ಹೋಗಿ ಬರುತ್ತಿದ್ದರು. ಅದರಂತೆ ನ.12ರಂದು ಸಂಜೆ 6 ಗಂಟೆಗೆ ಹೋಗಿದ್ದರು ಎನ್ನಲಾಗಿದೆ. ಆದರೆ ನ. 17 ಸಂಜೆ 6ಗಂಟೆಗೆ ಹೆಗ್ಗುಂಜೆ ಗ್ರಾಮದ ಮಹೇಶ್ ಶೆಟ್ಟಿಯವರ ಕಲ್ಲುಕೋರೆಯ ಪಶ್ಚಿಮ ಭಾಗದಲ್ಲಿ ಇರುವ  ಅರಣ್ಯ ಇಲಾಖೆಗೆ ಸಂಬಂಧಿಸಿದ ಖಾಲಿ ಜಾಗದಲ್ಲಿ ಪುಟ್ಟಯ್ಯ ನಾಯ್ಕ ಅವರ ಮೃತದೇಹ ಪತ್ತೆಯಾಗಿತ್ತು. ಅವರು ಕುಸಿದುಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.