logo
WhatsApp Image 2026-04-02 at 14.46.04.jpeg
hindalco everlast.jpeg

ಬ್ರಹ್ಮಾವರ: ತಾಯಿ- ಮಗು ನಾಪತ್ತೆ

ಟ್ರೆಂಡಿಂಗ್
share whatsappshare facebookshare telegram
24 Dec 2021
post image

ಬ್ರಹ್ಮಾವರ: ತಾಯಿ ಹಾಗೂ ಮಗು ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದಲ್ಲಿ ನಡೆದಿದೆ. ಹಾರಾಡಿ ಗ್ರಾಮದ ವೆಂಕಪ್ಪ ಅಮೀನ್ ಕಂಪೌಂಡ್ ನಿವಾಸಿ ಮಾರುತಿ ಆರ್. ಅವರ ಪತ್ನಿ 30 ವರ್ಷದ ಆಶಾ ಆರ್ ಹಾಗೂ ಅವರ ಮಗ ಆರು ವರ್ಷದ ಮನೀಶಾ ನಾಪತ್ತೆಯಾಗಿದ್ದಾರೆ. ಮಾರುತಿ ದಂಪತಿ ಕಳೆದ 6 ತಿಂಗಳಿನಿಂದ ಹಾರಾಡಿ ಗ್ರಾಮದ “ವೆಂಕಪ್ಪ ಅಮೀನ್ ಕಂಪೌಂಡ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದೇ ವರ್ಷದ ನವೆಂಬರ್ 9 ರಂದು ಮಾರುತಿ ಅವರು ತರಕಾರಿ ವ್ಯಾಪಾರದ ನಿಮಿತ್ತ ಮನೆಯಿಂದ ಪೇಟೆಗೆ ಹೋಗಿದ್ದು, ಸಂಜೆ ಮನೆಗೆ ಬಂದು ನೋಡುವಾಗ ಹೆಂಡಿತಿ ಮತ್ತು ಮಗ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕ ಮನೆಗಳಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಈವರೆಗೂ ಪತ್ತೆಯಾಗಿರುವುದಿಲ್ಲ.  ಈ ಬಗ್ಗೆ ಪತಿ ಮಾರುತಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.