



ಬ್ರಹ್ಮಾವರ: ದೇವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸೆ.9ರಂದು ನಡೆದಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿ ಕೆ. ಶ್ರೀಪತಿ ಭಟ್ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆ. 8ರಂದು ದೇವಸ್ಥಾನದಲ್ಲಿ ಸೋಣೆಯಾರತಿ ಪೂಜೆ ಮುಗಿದ ಬಳಿಕ ಬಾಗಿಲು ಹಾಕಲಾಗಿತ್ತು. ಮರುದಿನ ಸೆ.9ರಂದು ಬೆಳಿಗ್ಗೆ 6 ಗಂಟೆಗೆ ಶಿವರಾಮ ಶೆಟ್ಟಿ ಎಂಬವರು ಮೈಕ್ ಆನ್ ಮಾಡಲು ಬಂದಾಗ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಬಗ್ಗೆ ಸಂಶಯಗೊಂಡು ಕೆ. ಶ್ರೀಪತಿ ಭಟ್ ಅವರಿಗೆ ಮಾಹಿತಿ ನೀಡಿದರು. ಅದರಂತೆ ಅವರು ದೇವಸ್ಥಾನಕ್ಕೆ ಬಂದು ಪರಿಶೀಲಿಸಿದಾಗ ಯಾರೋ ಕಳ್ಳರು ದೇವಸ್ಥಾನಕ್ಕೆ ನುಗ್ಗಿ ದೇವಸ್ಥಾನದ ಕಛೇರಿ ಕೊಠಡಿಯಲ್ಲಿದ್ದ ಗೋಡ್ರೇಜ್ ಮತ್ತು ಕಾಣಿಕೆ ಹುಂಡಿಯ ಲಾಕರ್ ಒಡೆದು ಒಟ್ಟು 11 ಸಾವಿರ ರೂ. ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.