logo
WhatsApp Image 2026-04-02 at 14.46.04.jpeg
hindalco everlast.jpeg

ಬ್ರಹ್ಮಾವರ : ಈಜಾಡಲು ಹೋಗಿ ಇಬ್ಬರು ಯುವಕರ ಮೃತ್ಯು

ಟ್ರೆಂಡಿಂಗ್
share whatsappshare facebookshare telegram
20 Oct 2021
post image

ಬ್ರಹ್ಮಾವರ: ಸ್ವರ್ಣಾ ನದಿಯಲ್ಲಿ ಈಜಾಡಲು ಹೋಗಿ ಮುಳುಗಿ ಮೃತಪಟ್ಟ ಇಬ್ಬರು ಯುವಕರ ಶವ ಬುಧವಾರ ಹೇರಂಜೆ ಉಗ್ಗೇಲುಬೆಟ್ಟು ಮಡಿಸಾಲು ರೈಲ್ವೆ ಬ್ರಿಡ್ಜ್ ಸಮೀಪ ಪತ್ತೆಯಾಗಿದೆ. ಮಂಗಳವಾರ ಅನಾಸ್‌, ಶ್ರೇಯಸ್‌ ಮತ್ತು ಇನ್ನೋರ್ವ ಬಾಲಕ ಸ್ವರ್ಣಾ ನದಿಯಲ್ಲಿ ಈಜಾಡಲು ತೆರಳಿದ್ದು, ಅನಾಸ್‌ ಮತ್ತು ಶ್ರೇಯಸ್‌ ನೀರುಪಾಲಾಗಿದ್ದು, ನೀರುಪಾಲಾದ ಯುವಕರ ಬಗ್ಗೆ ಮಾಹಿತಿ ನೀಡದೆ ಇನ್ನೋರ್ವ ಬಾಲಕ ಪಾರಾಗಿ ಮನೆಗೆ ಸೇರಿದ್ದ ಎನ್ನಲಾಗಿದೆ.

ಅನಾಸ್‌ ಮತ್ತು ಶ್ರೇಯಸ್‌ ಕಾಣೆಯಾದ ಬಗ್ಗೆ ಮನೆಯವರಿಂದ ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದು ವಿಚಾರಣೆ ವೇಳೆ ನೀರುಪಾಲಾದ ವಿಚಾರ ಬಯಲಾಗಿದೆ. ಮಂಗಳವಾರದ ಸಂಜೆಯಿಂದ ಸ್ವರ್ಣಾ ನದಿಯಲ್ಲಿ ಹುಡುಕಾಟ ನಡೆಸಿದ್ದು, ಬುಧವಾರ ಈಜು ಪಟು ಈಶ್ವರ್ ಕಾರ್ಯಚರಣೆ ನಡೆಸಿದ್ದು ಹರಿಯುವ ನದಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.