logo
WhatsApp Image 2026-04-02 at 14.46.04.jpeg
hindalco everlast.jpeg

ಸ್ತನ್ಯಪಾನವು ತಾಯಿ ಮತ್ತು ಮಗುವಿನ ಮೂಲಭೂತ ಹಕ್ಕು, ಕರ್ನಾಟಕ ಹೈಕೋರ್ಟ್

ಟ್ರೆಂಡಿಂಗ್
share whatsappshare facebookshare telegram
30 Sept 2021
post image

ಬೆಂಗಳೂರು: ಸ್ತನ್ಯಪಾನವು ತಾಯಿ ಮತ್ತು ಮಗುವಿನ ಮೂಲಭೂತ ಹಕ್ಕು, ಸ್ತನ್ಯಪಾನ ಮಾಡಿಸುವ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಮಗು ಜನಿಸಿದ ಕೂಡಲೇ ಸಾಕು ತಾಯಿಯೊಬ್ಬರು ಮಗುವನ್ನು ಕದ್ದೊಯ್ದಿದ್ದರು.ಜನ್ಮ ಕೊಟ್ಟ ತಾಯಿಯು ತನ್ನ ಮಗುವನ್ನು ಸಾಕು ತಾಯಿಯಿಂದ ಹಿಂದಿರುಗಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ತಾಯಿಯು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಪ್ರಾಪ್ತ ಮಗುವಿನ ಪಾಲನೆಯನ್ನು ಆನುವಂಶಿಕ ತಾಯಿಗೆ ನೀಡುವ ಅಗತ್ಯವಿದೆ, ಏಕಕಾಲಿಕ ಹಕ್ಕುಗಳ ಪ್ರಕರಣವಾಗಿದ್ದು ಮಾತೃತ್ವದ ಈ ಪ್ರಮುಖ ಲಕ್ಷಣವು ಭಾರತದ ಸಂವಿಧಾನದ 21 ನೇ ವಿಧಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕಿನಡಿ ರಕ್ಷಿಸಲ್ಪಟ್ಟಿದೆ. ಹೀಗಾಗಿ ತಾಯಿಯು ತನ್ನ ಹೆತ್ತ ಮಗುವಿನ ಸ್ತನ್ಯಪಾನ ಮಾಡಿಸುವ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇದು ತಾಯಿ ಮತ್ತು ಮಗು ಇಬ್ಬರ ಮೂಲಭೂತ ಹಕ್ಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.