



ಕಾರ್ಕಳ: ನಮ್ಮ ಸಮಾಜದಲ್ಲಿ ಹಲವಾರು ಸಂಘಟನೆಗಳಿವೆ.ಈ ಸಂಘಟನೆಗಳ ಬದಲು ಶಾಲೆ ಗಳನ್ನು ಕಟ್ಟಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ವೇದ ಕುಮಾರ್ ಎಂ ರವರು ಕರೆ ನೀಡಿದರು ಇವರು ಶ್ರೀ ನಾರಾಯಣ ಗುರು ರವರ 167ನೇ ಜನ್ಮ ದಿನಾಚರಣೆ ಅಂಗವಾಗಿ ರಶ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ಕಾರ್ಕಳ ವತಿಯಿಂದ ಬಿಲ್ಲವ ಸಮಾಜ ಸೇವಾ ಸಂಘ (ರಿ)ಇವರ ಸಹಯೋಗದೊಂದಿಗೆ ಕಾರ್ಕಳ ಪೆರ್ವಾಜೆ ಬಲ್ಲವ ಸಮಾಜ ಮಂದಿರದಲ್ಲಿ ಗೌರವಾಭಿನಂದನೆ,ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದರು ಬಿಲ್ಲವ ಸಮಾಜದಲ್ಲಿ ಐಎಎಸ್,ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರ ಸಂಖ್ಯೆ ತೀರಾ ಕಡಿಮೆ.ವಿದ್ಯಾವಂತರು ನಗರ ಭಾಗದ ಬದಲು ಹಳ್ಳಿಗಳಿಗೆ ತೆರಳಿ ಬಡಜನರ ಸೇವೆಯನ್ನು ಮಾಡಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದ ಅವರು ಸಿ ಇ ಟಿ ,ನೀಟ್ ಪರೀಕ್ಷೆ ಗಳಲ್ಲಿ ಉತ್ತಮ ರ್ಯಾಂಕ್ ಪಡೆದು ಸರಕಾರಿ ಕಾಲೇಜಿನಲ್ಲಿ ಬೆಂಗಳೂರು ನಲ್ಲಿ ಕಲಿಯಲಿಚ್ಚಿಸಿರುವವರಗೆ ಉಚಿತವಾಗಿ ಎಲ್ಲಾ ಖರ್ಚು ಗಳನ್ನು ಬೆಂಗಳೂರು ಸಂಘವು ಬರಿಸಲಿದೆ ಎಂದರು ಬೆಂಗಳೂರು ಪ್ರದೇಶದಲ್ಲಿ ಕಲಿಯುವ ಸಮಾಜದ ವಿದ್ಯಾರ್ಥಿ ಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ ಗಳನ್ನು ನೀಡಲಿದ್ದು ಇದರ ಪ್ರಯೋಜನ ವನ್ನು ಪಡೆದು ಕ್ಕೊಳ್ಳಿ ಎಂದರು ಮಾನಸಿಕ ಆವಿಷ್ಕಾರಗಳನ್ನು ಬೆಳೆಸಿಕೊಳ್ಳಿ: ಸೋಲೂರು ಮಠಾಧೀಶರು ಮನುಷ್ಯನು ಬಟ್ಟೆ ,ಸೌಂದರ್ಯ ,ಅಲಂಕಾರ ದಲ್ಲಿ ಮಾತ್ರ ವಿವಿಧ ಆವಿಷ್ಕಾರಗಳು ಮಾಡುವುದು ನಿಜವಾದ ಆವಿಷ್ಕಾರಲ್ಲ ಬದಲಾಗಿ ಮನಸ್ಸಿನ ಮಾನಸಿಕ ಆವಿಷ್ಕಾರಗಳು ಬರಬೇಕು ನಮ್ಮಲ್ಲಿ ನಾನಸಿಕ ಕ್ರಾಂತಿ ನಡೆಯಬೇಕಾಗಿದೆ ಎಂದು ಸೋಲೂರು ಮಠಾಧೀಶ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ ಯವರು ಕರೆ ನೀಡಿದರು ಇವರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಾ ಮನುಷ್ಯ ಜೀವನ ಅತ್ಯಮೂಲ್ಯ ವಾದದ್ದು ತನ್ನ ಜೀವನದ ಸದುಪಯೋಗ ಪಡಿಸಿಕೊಂಡು ಜೀವನ ಸಾರ್ಧಕ ಪಡಿಸಿಕೊಳ್ಳಿ, ಸರಕಾರದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಸಮುದಾಯದ ಜನರು ಕಡಿಮೆಯಾಗುತ್ತಿದೆ ಅದ್ದರಿಂದ ತನ್ನ ಜೀವಿತಾವಧಿಯಲ್ಲಿ ಕನಿಷ್ಠ ನೂರು ಜನರನ್ನು ಐಎಎಸ್, ಅಧಿಕಾರಿಗಳನ್ನಾಗಿ ರೂಪುಗೊಳಿಸುವ ಪ್ರಯತ್ನದಲ್ಲಿದ್ದೇನೆ ಈ ನಿಟ್ಟಿನಲ್ಲಿ ,1 ನೇ ತರಗತಿಯಿಂದಲೇ 40 ರಿಂದ 80. ಮಕ್ಕಳನ್ನು ದತ್ತು ಸ್ವಿವಕರಿಸಿದ್ದೇನೆ. ಮುಂದಿನ ದಿನಗಳಲ್ಲಿ _4000 ಮಕ್ಕಳಿಗೆ ವ್ಯವಸ್ಥಿತವಾಗಿ ಕಲಿಸುವ ಚಿಂತನೆ ನಡೆಸಿದೆ. ಡಿಗ್ರಿ ಯಾದ ವಿಧ್ಯಾರ್ಥಿಗಳಿಗೆ ಕೆಎಎಸ್ ,ಪೋಲಿಸ್ ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಪ್ರಯೋಜನ ಪಡೆಯುವಂತೆ ಆಗ್ರಹಿಸಿದರು
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಡಿ ಆರ್ ರಾಜು, ತನ್ನ ರಶ್ಮಿ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಕಾರ್ಕಳ ತಾಲೂಕಿನ ಬಿಲ್ಲವ ಸಮಾಜ ದ ಬಡ ವಿದ್ಯಾರ್ಥಿ ಗಳಿಗೆ ಸುಮಾರು 7.87 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಬಡ ನಿರ್ಗತಿಕ ಮಹಿಳೆಯರಿಗೆ ಸಹಾಯಧನ,ಅನಾಥ ಮಕ್ಕಳಿಗೆ ಸಹಾಯಧನವನ್ನು ನೀಡಿದ್ದೇವೆ ಕಾರ್ಕಳ ತಾಲೂಕಿನ ಬಿಲ್ಲವ ಸಮಾಜದ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ಕ್ರೀಡಾ ಪಟುಗಳು, ಕೊರೊನಾ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದರ ವೈದರು, ಗ್ರಾಮ ಪಂಚಾಯತಿ ಅದ್ಯಕ್ಷ, ಉಪಾಧ್ಯಕ್ಷರು, ಆರಕ್ಷಕರು, ಅಂಚೆ ಸಿಬ್ಬಂದಿಗಳು, ಆರೋಗ್ಯ ಶುಶ್ರೂಕಿಯರು, ಮತ್ತು ಆಶಾಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಗೌರವಿಸುವ ಮೂಲಕ ಪೂಜ್ಯನೀಯ ನಾರಾಯಣ ಗುರುಗಳಿಗೆ ಗುರುವಂದನೆ ,ಗೌರವ ಸಮರ್ಪಣೆ ಮಾಡಿದ ಸಂತ್ರಪ್ತಿ ನನಗಿದೆ ಇನ್ನೂ ಮುಂದೆಯು ಇಂತಹ ಸಮಾಜ ಮುಖಿ ಕೆಲಸಕ್ಕೆ ನಿಮ್ಮ ಸಹಕಾರ ಸದಾ ಇರಲಿ ಎಂದರು ಶ್ರೇಷ್ಠ ಕ್ರಷಿಕ ಪ್ರಶಸ್ತಿ ಪುರಸ್ಕೃತ ಎಸ್ ಕೆ ಸಾಲಿಯಾನ್, ರಶ್ಮಿ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷೆ ಸಾವಿತ್ರಿ ಡಿ ಆರ್ ರಾಜು ,ಸದಸ್ಯರಾದ ಚಿತ್ತರಂಜನ್ ಸಾಲಿಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಈ ಸಮಾರಂಭದಲ್ಲಿ ಕಾರ್ಕಳ ತಾಲೂಕಿನ ಬಿಲ್ಲವ ಸಮಾಜದ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ಕ್ರೀಡಾ ಪಟುಗಳು, ವೈದರು, ಗ್ರಾಮ ಪಂಚಾಯತಿ ಅದ್ಯಕ್ಷ, ಉಪಾಧ್ಯಕ್ಷರು, ಆರಕ್ಷಕರು, ಅಂಚೆ ಸಿಬ್ಬಂದಿಗಳು, ಆರೋಗ್ಯ ಶುಶ್ರೂಕಿಯರು, ಮತ್ತು ಆಶಾಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು ಬಿಲ್ಲವ ಸಮಾಜ ಕಾರ್ಯದರ್ಶಿ ಪ್ರಭಾಕರ್ ಬಂಗೇರ ಪ್ರಸ್ತಾವನೆಗೈದರು ಕೋಶಾಧಿಕಾರಿ ಪ್ರವೀಣ್ ಸುವರ್ಣ, ಧನ್ಯವಾದ ಅರ್ಪಿಸಿದರು ವಸಂತ್ ಎಂ ,ನವೀನ ಸುವರ್ಣ ಕಾರ್ಯಕ್ರಮ ನಿರೂಪಿಸಿದರು ಇತ್ತೀಚೆಗೆ ಇಹಲೋಕ ತ್ಯಜಿಸಿದ ಖ್ಯಾತ ಸಿನಿಮಾ ನಟ ಪುನೀತ್ ರಾಜ್‍ಕುಮಾರ್, ಬಿಲ್ಲವ ಮುಖಂಡ ಮಾಜಿ ಪುರಸಭಾ ಅಧ್ಯಕ್ಷ , ಮಾಜಿ ಎ ಪಿ ಎಂ ಸಿ ಅಧ್ಯಕ್ಷ ಪ್ರದೀಪ್ ಕೋಟ್ಯಾನ್ ರವರಿಗೆ ಶ್ರಧ್ದಾಂಜಲಿ ಸಲ್ಲಿಸಲಾಯಿತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.