logo
WhatsApp Image 2026-04-02 at 14.46.04.jpeg
hindalco everlast.jpeg

ಶುಂಠಿ ತುಂಬಿದ್ದ ಎತ್ತಿನಗಾಡಿ ಬಿದ್ದು ಬಾಲಕ ಮೃತ್ಯು..!

ಟ್ರೆಂಡಿಂಗ್
share whatsappshare facebookshare telegram
15 Sept 2024
post image

ಮಡಿಕೇರಿ: ಕುಶಾಲನಗರ ಸಮೀಪ ತೊರೆನೂರು ಗ್ರಾಮದಲ್ಲಿ ಶುಂಠಿ ತುಂಬಿದ್ದ ಎತ್ತಿನ ಗಾಡಿ ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ತೊರೆನೂರು ಗ್ರಾಮದ ಟಿ.ಆರ್.ಮಧು ಹಾಗೂ ಅನು ದಂಪತಿಯ ಪುತ್ರ ಟಿ.ಎಂ.ತರುಣ್ (7) ಮೃತ ಬಾಲಕ.

ರವಿವಾರ ಬೆಳಿಗ್ಗೆ ಬಾಲಕನ ಮನೆಯ ಬಳಿ ಶುಂಠಿ ತುಂಬಿದ್ದ ಎತ್ತಿನ ಗಾಡಿ ಭಾರ ಹೆಚ್ಚಾಗಿ ಮಗುಚಿಕೊಂಡಿತು. ಈ ಸಂದರ್ಭ ಪಕ್ಕದಲ್ಲೇ ಇದ್ದ ತರುಣ್ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ ಎನ್ನಲಾಗಿದೆ. ತಕ್ಷಣ ಬಾಲಕನನ್ನು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ತರುಣ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.