



ಕಾರ್ಕಳ :
ಹಿರ್ಗಾನ ಬಳಿ ಬಸ್ ಬೊಲೆರೊ ಮುಖಾ ಮುಖಿ ಢಿಕ್ಕಿ ಯಾದ ಘಟನೆ ಇಂದು ಸಂಜೆ ಹಿರ್ಗಾನದ ದುಗ್ಗಣರಾಯ ಚಡಾವು ಎಂಬಲ್ಲಿ ನಡೆದಿದೆ .ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ . ಬಸ್ ನ ಮುಂಭಾಗ ಹಾಗೂ ಬೊಲೆರೊ ಗಾಡಿಯ ಮುಂಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ .
ಬಸ್ ಕಾರ್ಕಳ ದಿಂದ ಹೆಬ್ರಿಯ ಕಡೆಗೆ ಸಾಗುತಿತ್ತು .
ಇದೆ ಸ್ಥಳದಲ್ಲಿ ರಸ್ತೆಯ ಮೋರಿ ಕುಸಿತ ಕಾಮಗಾರಿಯು ನಡೆಯುತ್ತಿದೆ . ಬಸ್ ಹಾಗೂ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಯುಂಟಾಗಿದೆ . ಇದೆ ಸ್ಥಳದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಇದೇ ಕಂಪೆನಿಗೆ ಸೇರಿದ ಬೆಂಗಳೂರಿಗೆ ಸಾಗಿಸುತಿದ್ದ ಖಾಸಗಿ ಬಸ್ ಹಾಗು ಪಿಕ್ ಅಪ್ ನಡುವೆ ಡಿಕ್ಕಿ ಯಾಗಿ ಓರ್ವ ಮೃತಪಟ್ಟಿದ್ದ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.