



ನವದೆಹಲಿ: ಪೋರ್ನ್‌ಹಬ್ ಮೂಲಕಂಪನಿ ಮೈಂಡ್‌ಗೀಕ್ ತನ್ನ ಹೆಸರನ್ನು ಬದಲಾಯಿಸಿಕೊಳ್ತಿದೆ. ‘ಆಯ್ಲೋ’ ಎಂದು ಕಂಪನಿ ಹೆಸರು ಬದಲಾಯಿಸಿಕೊಂಡಿದೆ. ಕಂಪನಿಯ ಹೊಸ ಮಾಲೀಕರು ಹೊಸ ಪ್ರಾರಂಭವನ್ನು ಬಯಸುತ್ತಿರುವುದರಿಂದ ಅದರ ಹೆಸರನ್ನು ಬದಲಾಯಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ಈ ಬಗ್ಗೆ ವರದಿ ಮಾಡಿದೆ.
“ಕಂಪನಿಯನ್ನು ‘Aylo’ಎಂದು ರೀಬ್ರ್ಯಾಂಡ್ ಮಾಡುವ ನಿರ್ಧಾರವು ಹೊಸ ಪ್ರಾರಂಭದ ಅಗತ್ಯತೆ ಮತ್ತು ನಾವೀನ್ಯತೆ, ವೈವಿಧ್ಯಮಯ ಹಾಗೂ ಅಂತರ್ಗತ ವಯಸ್ಕ ವಿಷಯಗಳು ಮತ್ತು ನಂಬಿಕೆ ಹಾಗೂ ಸುರಕ್ಷತೆಗೆ ನವೀಕೃತ ಬದ್ಧತೆಗೆ ಪ್ರತಿಕ್ರಿಯೆಯಾಗಿ ಬರುತ್ತದೆ” ಎಂದು ಕಂಪನಿಯು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಮೈಂಡ್‌ಗೀಕ್ ತಕ್ಷಣವೇ “ಆಯ್ಲೋ” ಹೆಸರಿಗೆ ರೀಬ್ರ್ಯಾಂಡ್ ಆಗುತ್ತಿದೆ ಎಂದೂ ತಿಳಿದುಬಂದಿದೆ.
ಇನ್ನು, ‘Aylo’ ಎಂಬ ಹೆಸರು ಏಕೆ ಬಂದಿದೆ ಎಂಬುದಕ್ಕೆ, ಕಂಪನಿಯ ವಕ್ತಾರರು ಈ ಪದವನ್ನು ನಿರ್ದಿಷ್ಟವಾಗಿ ಆಯ್ಕೆಮಾಡಲಾಗಿದೆ. ಏಕೆಂದರೆ ಅದು ಅರ್ಥವನ್ನು ಹೊಂದಿಲ್ಲ ಮತ್ತು ನಿಘಂಟಿನಲ್ಲಿ ಕಂಡುಬರುವುದಿಲ್ಲ ಎಂದರು. ಹೊಸ ಬ್ರ್ಯಾಂಡಿಂಗ್ ಮತ್ತು ಲೋಗೋ ಶೀಘ್ರದಲ್ಲೇ ಎಲ್ಲಾ ಕಂಪನಿಯ ಸಂವಹನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊರಹೊಮ್ಮಲಿದೆ ಎಂದೂ ಹೇಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.