



ಬೈಂದೂರು: ತಾಲೂಕಿನ ಬಿಜೂರು ನಾಯ್ಕನಕಟ್ಟೆ ಬಳಿ ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆಯಾದ ಘಟನೆ ಇಂದು ನಡೆದಿದೆ. ಬಿಜೂರು ರೈಲ್ವೆ ಸ್ಟೇಷನ್ ನಲ್ಲಿ ಕರ್ತವ್ಯದಲ್ಲಿ ಇರುವ ಸಂತೋಷ್ ನಾಯ್ಕ್ ಎಂಬವರಿಗೆ ಇಂದು ಟ್ರ್ಯಾಕ್ ಪೆಟ್ರೋಮ್ಯಾನ್ ಸುಬ್ರಹ್ಮಣ್ಯ ಕರೆ ಮಾಡಿ, ನಾಯ್ಕನಕಟ್ಟೆ ಬಳಿ ರೈಲ್ವೆ ಹಳಿಯಲ್ಲಿ ವ್ಯಕ್ತಿಯ ಮೃತದೇಹ ಕಂಡುಬಂದಿದೆ. ವ್ಯಕ್ತಿ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರೈಲು ಡಿಕ್ಕಿಯಾಗಿ ಅಥವಾ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.