logo
WhatsApp Image 2026-04-02 at 14.46.04.jpeg
hindalco everlast.jpeg

ಬೈಂದೂರು: ಪಾಳುಬಾವಿಗೆ ಬಿದ್ದು ಅಟೆಂಡರ್ ಸಾವು

ಟ್ರೆಂಡಿಂಗ್
share whatsappshare facebookshare telegram
5 Sept 2022
post image

ಬೈಂದೂರು:

ತೋಟದಲ್ಲಿ ಬಿದ್ದ ತೆಂಗಿನ ಕಾಯಿ ಹೆಕ್ಕಲು ಹೋದ ವ್ಯಕ್ತಿಯೊಬ್ಬರು ಪಾಳು ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ಸೆ.4ರಂದು ನಡೆದಿದೆ. ಮೃತರನ್ನು ಯಡ್ತರೆ ಸಮುದಾಯ ಆಸ್ಪತ್ರೆ ಬಳಿಯ ನಿವಾಸಿ 59ವರ್ಷದ ಅಚ್ಚುತ ಎಮ್ ಮೃತದುರ್ದೈವಿ. ಇವರು ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಟೆಂಡರ್ ಆಗಿ  ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ‌. ನಿನ್ನೆ ಮನೆಯ ಪಕ್ಕದ ಗುಡೆಮನೆ ನಾಗಪ್ಪ ಶೇರುಗಾರರ ಅವರ ತೋಟದಲ್ಲಿ ಬಿದ್ದಿದ ತೆಂಗಿನಕಾಯಿಯನ್ನು ಹೆಕ್ಕಲು ಹೋಗಿದ್ದರು‌. ಈ ವೇಳೆ ಪಾಳುಬಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ‌. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.