logo
WhatsApp Image 2026-04-02 at 14.46.04.jpeg
hindalco everlast.jpeg

ಬೈಂದೂರು: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಟ್ರೆಂಡಿಂಗ್
share whatsappshare facebookshare telegram
15 Oct 2022
post image

ಬೈಂದೂರು:

ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರೂರು ಕೆಳಪೇಟೆಯಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು ರವಿ ಮೇಸ್ತ ಎಂದು ಗುರುತಿಸಲಾಗಿದೆ. ರವಿ ಮೇಸ್ತ ಅವರು ಶಿರೂರು ಮೇಲ್ಪೇಟೆ ಕಡೆಯಿಂದ ಹೆದ್ದಾರಿಯ ಪೂರ್ವ ದಿಕ್ಕಿನಲ್ಲಿ ಬಂದು ಶಿರೂರು ಕೆಳಪೇಟೆಯ ಯೂ-ಟರ್ನ್ ಬಳಿ ರಸ್ತೆಯನ್ನು ದಾಟಲು ತಮ್ಮ ಬೈಕ್ ನ್ನು ನಿಲ್ಲಿಸಿ  ನಿಂತಿದ್ದರು. ಈ ವೇಳೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೆದ್ದಾರಿಯ ಪಶ್ಚಿಮ ಬದಿಯ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿ ಚಾಲಕ ಮೈನುದ್ದೀನ್ ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರವಿ ಮೇಸ್ತ ಅವರು ಬೈಕ್ ಸಮೇತ ಲಾರಿಯ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಲಾರಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಉಸಿರುಚೆಲ್ಲಿದ್ದಾರೆ. ಈ ಬಗ್ಗೆ ಶಿರೂರಿನ ನಾಗರಾಜ ಮೇಸ್ತ ಎಂಬವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.