



ಹೊಸದಿಲ್ಲಿ: ಕೊರೋನಾ ಸೋಂಕಿನ ಭೀತಿಯಿಂದ ಭಾರತದ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧಗಳನ್ನು ಕೆನಡಾ ಸರ್ಕಾರ ತೆರವುಗೊಳಿಸಿದೆ. ಇನ್ನು ಮುಂದೆ ಕೊರೋನಾ ಮಾರ್ಗಸೂಚಿಯ ಅನ್ವಯ ಭಾರತದಿಂದ ಕೆನಡಾಗೆ ಪ್ರಯಾಣಿಕ ವಿಮಾನಗಳು ಸಂಚರಿಸಬಹುದಾಗಿದೆ. ಭಾರತೀಯ ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದ ಅನುಮೋದಿತ ಪ್ರಯೋಗಾಲಯದಿಂದ ಕೊರೋನಾ ನೆಗೆಟಿವ್ ವರದಿಯನ್ನು ಹೊಂದಿರಬೇಕು ಹಾಗೂ ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿಯೇ ಭಾರತದಿಂದ ಪ್ರಯಾಣಿಕರು ತೆರಳಬಹುದಾಗಿದೆ. ಸೆ.30ರಿಂದ ಕೆನಡಾಗೆ ಏರ್ ಇಂಡಿಯಾ ವಿಮಾನಯಾನ ಸೇವೆ ಆರಂಭಿಸಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.