



ಉಡುಪಿ: ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ, ಉಡುಪಿ ವತಿಯಿಂದ ನವರಾತ್ರಿ ಹಾಗು ದೀಪಾವಳಿ ಹಬ್ಬಗಳ ಪ್ರಯುಕ್ತ ಕೆನರಾ ರಿಟೈಲ್ ಮೇಳ - 2023 ಬ್ರಹತ್ ಸಾಲ ಮೇಳವನ್ನು ಅಕ್ಟೋಬರ್ 15 ಮತ್ತು 16 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ರ ವರಗೆ ನಗರದ ಕುಂಜಿಬೆಟ್ಟು ಎಮ್.ಜಿ.ಎಮ್. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಅ. 15 ರಂದು ಬೆಳಗ್ಗೆ 9.30 ಕ್ಕೆ ಎಮ್.ಜಿ.ಎಮ್. ಕಾಲೇಜು ಮೈದಾನದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಮೇಳಕ್ಕೆ ಚಾಲನೆ ನೀಡಲಿದ್ದು, ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಟಿ. ಸಿದ್ದಲಿಂಗಪ್ಪ ಹಾಗೂ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಹಾಪ್ರಭಂದಕ ಎಂ. ಜಿ. ಪಂಡಿತ್ ಭಾಗವಹಿಸುವರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.