



ಬೈಂದೂರು: ತಾಲೂಕಿನ ಒತ್ತಿನೆಣೆ ಬಳಿ ಕಾರೊಂದು ಪಲ್ಟಿಯಾಗಿ ಪಕ್ಕದ ರಸ್ತೆಗೆ ಉರುಳಿ ಬಿದ್ದ ಘಟನೆ ಜುಲೈ17 ನಡೆದಿದೆ. ಕಾರು ಚಾಲಕ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣ ರಸ್ತೆ ಸಂಚರಿಸುತ್ತಿದ್ದ ಇತರೆ ವಾಹನದ ಪ್ರಯಾಣಿಕರ ಸಹಕಾರದಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಶಿರೂರಿನಿಂದ ಕುಂದಾಪುರ ಕಡೆ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಭಟ್ಕಳ ಕಡೆ ಸಾಗುವ ರಸ್ತೆಗೆ ಉರುಳಿ ಬಿದ್ದಿದೆ. ಇದರ ಪರಿಣಾಮ ಚಾಲಕ ಕಾರಿನಡಿ ಸಿಲುಕಿದ್ದು, ತಕ್ಷಣವೇ ಇತರ ವಾಹನ ಹಾಗೂ ಬಸ್ ನಲ್ಲಿದ್ದವರು ವಾಹನ ನಿಲ್ಲಿಸಿ ಕಾರನ್ನು ಸರಿಸಿ ಚಾಲಕನ ಪ್ರಾಣ ಉಳಿಸಿದ್ದಾರೆ. ಆತನನ್ನು ಬೈಂದೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಭಾಗದಲ್ಲಿ ನಿರಂತರ ವಾಹನ ಅಪಘಾತ ನಡೆಯುತ್ತಿದ್ದು, ಇದುವರಗೂ ಅಪಘಾತ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳದಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.