logo
WhatsApp Image 2026-04-02 at 14.46.04.jpeg
hindalco everlast.jpeg

‘ಕಾಸ್ಕ್’ ಸಂಸ್ಥೆಯ ಮಹಾಸಭೆ ಮತ್ತು ಪುನರ್ಮಿಲನ.

ಟ್ರೆಂಡಿಂಗ್
share whatsappshare facebookshare telegram
27 Sept 2025
post image

ಮಂಗಳೂರು: ಬೆಂದೂರ್ ಚರ್ಚ್ ಸಭಾಂಗಣದಲ್ಲಿ ಕಾಸ್ಕ್ ಸಂಸ್ಥೆಯ ವಾರ್ಷಿಕ ಮಹಾಸಭೆಯು ಸಪ್ಟೆಂಬರ್ 21ರಂದು ನಡೆಯಿತು. ಮಹಾಸಭೆಯ ನಂತರ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ಪುನರ್ಮಿಲನ ಸಮಾರಂಭವು ನೆರವೇರಿತು.

ಫ್ಲೋರಾ ಕ್ಯಾಸ್ಟೆಲಿನೊ ಸಂಚಾಲನೆಯಲ್ಲಿ ಕೊಂಕಣಿ ಸಂಸ್ಕೃತಿ ಮತ್ತು ಪರಂಪರೆಯ ಅನೇಕ ಕಾರ್ಯಕ್ರಮಗಳು ನೆರವೇರಿದವು. ರೆಮೋನಾ ಇವೆಟ್ ಪಿರೇರಾ ಭರತನಾಟ್ಯವನ್ನು ಪ್ರದರ್ಶಿಸಿದರು. ಇತ್ತೀಚೆಗೆ ನಡೆದ 120 ಗಂಟೆಗಳ ಪ್ರದರ್ಶನ ಮತ್ತು ವಿಶ್ವ ದಾಖಲೆಗಾಗಿ ಅವರನ್ನು ಅಭಿನಂದಿಸಲಾಯಿತು. ಅವರ ಅಸಾಧಾರಣ ಸಾಧನೆಗಾಗಿ ಪ್ರತಿಷ್ಠಿತ ‘ಕಾಸ್ಕ್ ಮೊತಿಯಾಂ’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಸಾನ್ಸಿಯಾ ಅವರ ಕೊಂಕಣಿ ಪರಂಪರೆಯ ನುಡಿನಮನ, ಪ್ರಜ್ವಲ್ ಮತ್ತು ಶವಿಲ್ ಅವರ ‘ಗುಮಟ್’ ವಾದನ, ಮೆಲ್ವಿಟಾ ಹಾಗೂ ತಂಡದಿಂದ ದೆಖ್ಣಿ ನಾಚ್, ರೋಮಿತ್ ಹಾಗೂ ತಂಡದಿಂದ ತೊಣಿಯೊ ನಾಚ್ ನಂತಹ ಜಾನಪದ ನೃತ್ಯಗಳು ಪ್ರದರ್ಶಿಸಲ್ಪಟ್ಟವು. ಫ್ರ್ಯಾಂಕ್ಲಿನ್ ಅವರ ‘ ಮಾಂಡೊ’ ಗಾಯನವು ಉತ್ಸವಕ್ಕೆ ಶಾಸ್ತ್ರೀಯ ಗೋವಾ ಸೊಬಗನ್ನು ನೀಡಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಪ್ರತಿಮಾ ಅವರನ್ನು ಗೌರವಿಸಲಾಯಿತು. ಜಾನೆಟ್ ಡಿಸೋಜಾ ನಡೆಸಿ ಕೊಟ್ಟ ಹೌಸಿ ಹೌಸಿ ಆಟದೊಂದಿಗೆ ಉಪಾಧ್ಯಕ್ಷರಾದ ಡಾ। ರೋಹನ್ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.