



ನವದೆಹಲಿ: 2023-24 ನೇ ಸಾಲಿನ ಸಿಬಿಎಸ್ಇ 10ನೇ, 12ನೇ ತರಗತಿಯ ಪರೀಕ್ಷಾ ದಿನಾಂಕ ವೇಳಾಪಟ್ಟಿ ಪ್ರಕಟಿಸಿದೆ. ಇದರ ಅನುಸಾರ ಫೆಬ್ರವರಿ 15 ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತದೆ.
10 ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 21ರಿಂದ ಪ್ರಾರಂಭವಾಗಿ ಮಾರ್ಚ್ 11 ರ ವರೆಗೆ ಇರಲಿದೆ. ಹಾಗೇ 12 ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15 ಏಪ್ರಿಲ್ 1ರ ವರೆಗೆ ವಿವಿಧ ಪರೀಕ್ಷೆಗಳು ನಡೆಯಲಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 10 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿವೆ: ಫೆಬ್ರವರಿ 21 - ಹಿಂದಿ, ಫೆಬ್ರವರಿ 26 - ಇಂಗ್ಲೀಷ್, ಮಾರ್ಚ್ 2 - ವಿಜ್ಞಾನ, ಮಾರ್ಚ್ 7 - ಸಮಾಜ ವಿಜ್ಞಾನ, ಮಾರ್ಚ್ 11 - ಗಣಿತ ಪರೀಕ್ಷೆ ನಡೆಯಲಿದೆ. ಹಾಗೂ
12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿವೆ: ಫೆಬ್ರವರಿ 19 - ಹಿಂದಿ, ಫೆಬ್ರವರಿ 22 - ಇಂಗ್ಲೀಷ್, ಫೆಬ್ರವರಿ 27 - ರಸಾಯನಶಾಸ್ತ್ರ, ಫೆಬ್ರವರಿ 29 - ಭೂಗೋಳಶಾಸ್ತ್ರ, ಮಾರ್ಚ್ 4 - ಭೌತಶಾಸ್ತ್ರ, ಮಾರ್ಚ್ 9 - ಗಣಿತ, ಮಾರ್ಚ್ 18 - ಅರ್ಥಶಾಸ್ತ್ರ, ಮಾರ್ಚ್ 19 - ಜೀವಶಾಸ್ತ್ರ, ಮಾರ್ಚ್ 22 - ರಾಜಕೀಯ ವಿಜ್ಞಾನ, ಮಾರ್ಚ್ 23 - ಅಕೌಂಟೆನ್ಸಿ, ಮಾರ್ಚ್ 27 - ವ್ಯಾಪಾರ ಅಧ್ಯಯನ, ಮಾರ್ಚ್ 28 - ಇತಿಹಾಸ, ಮಾರ್ಚ್ 30 - ಸಂಸ್ಕೃತ, ಏಪ್ರಿಲ್ 1 - ಸಮಾಜಶಾಸ್ತ್ರ, ಏಪ್ರಿಲ್ 2 - ಕಂಪ್ಯೂಟರ್ ಸೈನ್ಸ್ ಗಣಿತ ಪರೀಕ್ಷೆ ನಡೆಯಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.