



ಕಾರ್ಕಳ : ಕಣ್ಣಿಗೆ ಕಾಣುವ ದೇವರೆಂದೇ ಪೂಜಿಸಲ್ಪಡುವ ಕಾಮಧೇನು ಗೋವಿನಲ್ಲಿ ೩೩ ಕೋಟಿ ದೇವರು ನೆಲೆಸಿದ್ದಾರೆ. ಗೋವಿಗೆ ಪೂಜೆ ಮಾಡಿದರೆ ೩೩ ಕೋಟಿ ದೇವರಿಗೆ ಸಮರ್ಪಿತವಾಗುತ್ತದೆ ಎಂಬ ನಂಬಿಕೆಗಳಿವೆ. ಈ ಕಾರಣದಿಂದ ದೀಪಾವಳಿ ಸಂದರ್ಭದಲ್ಲಿ ವಿಶೇಷವಾಗಿ ಗೋಮಾತೆಗೆ ಪುಷ್ಪಗಳಿಂದ ಸಿಂಗಾರಗೊಳಿಸಿ ಆರಾಧನೆ ಮಾಡಲಾಗುತ್ತದೆ.
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಕಾರ್ಕಳದ ಶ್ರೀ ವೆಂಕಟರಮಣ ಗೋಶಾಲ ಟ್ರಸ್ಟ್ನಲ್ಲಿ ಗೋವುಗಳಿಗೆ ಆರತಿ ಬೆಳಗುವ ಮೂಲಕ ಗೋಪೂಜೆಯನ್ನು ನೆರವೇರಿಸಲಾಯಿತು. ಜ್ಞಾನಸುಧಾ ಸಂಸ್ಥೆಯ ವತಿಯಿಂದ ಗೋವುಗಳಿಗೆ ಹಣ್ಣು-ಹಂಪಲು ಮತ್ತು ಬೆಲ್ಲವನ್ನು ನೀಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.