logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕದಳಿಪ್ರಿಯನ ನಾಡಿನಲ್ಲಿ ಮಾ.17ಕ್ಕೆ ಮನ್ಮಹಾರಥೋತ್ಸವದ ಸಂಭ್ರಮ

ಟ್ರೆಂಡಿಂಗ್
share whatsappshare facebookshare telegram
16 Mar 2023
post image

ಭಕ್ತರ ಪೊರೆಯುವ ಅನಂತಪದ್ಮನಾಭ

ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭ ಮೂರ್ತಿ ಕಪ್ಪುಕಲ್ಲಿನಲ್ಲಿ ಕೆತ್ತಲಾಗಿದೆ. ಸುಮಾರು ಮೂರು ಅಡಿ ಎತ್ತರದ ಈ ಮೂರ್ತಿ ನಿಂತ ಭಂಗಿಯಲ್ಲಿದ್ದು ಶಂಖ ಚಕ್ರ ಗದಾ ಪದ್ಮ ಭರಿಯಾದ ವಿಗ್ರಹವಾಗಿದೆ. ಹೊಕ್ಕುಳಿನ ಭಾಗದಲ್ಲಿ ಪದ್ಮದ ಚಿಹ್ನೆ ಗಳಿವೆ. ವಿಗ್ರಹದ ಮೆಲ್ಭಾಗದ ಸುತ್ತ ನಾಗ ದೇವರ ಹೆಡೆ ಚಿತ್ರಿಸಲಾಗಿದೆ.

ಹಿಂದುಗಳ ಪವಿತ್ರ ಕ್ಷೇತ್ರವಾದ ತಿರುಮಲವಾಸ ತಿಮ್ಮಪ್ಪನ ಹರಕೆ , ತಪ್ಪು ಮಾಡಿದವರು ಧರ್ಮಸ್ಥಳ ಮಂಜುನಾಥನಿಗೆ ಹಾಕುತಿದ್ದ ತಪ್ಪು ಕಾಣಿಕೆಗಳು ಕೂಡ ಇಲ್ಲಿ ಹಾಕುತಿದ್ದರು ಎಂಬ ನಂಬಿಕೆಯು ಇದೆ. ರೋಗ ರುಜಿನಗಳಿಗೆ ಸಂತಾನ ಭಾಗ್ಯಕ್ಕೆ, ಆರೋಗ್ಯ, ಸಿರಿ ಸಂಪತ್ತಿಗೆ ವೀಳ್ಯದೆಲೆ ಸೇವೆ, ದೋಷ ಪರಿಹಾರಕ್ಕೆ ಎಳ್ಳೆಣ್ಣೆ ಸೇವೆ ಪ್ರಮುಖ ವಿಶೇಷತೆಯಲ್ಲೊಂದಾಗಿದೆ.

ದೇವರ ಮೂಲ ಬಿಂಬದ ಎಢಬಾಗದಲ್ಲಿ ಎರಡು ಮೂರ್ತಿಗಳಿದ್ದು, ಎರಡು ಮೂರ್ತಿಗಳು ಒಂದೆ ರೀತಿಯಲ್ಲಿ ಕಾಣಸಿಗುವುದು. ಕಮಲದ ಮೆಲೆ ನಿಂತ ಅನಂತ ಪದ್ಮನಾಭ ನಾಭಿಯಲ್ಲಿ ಪದ್ಮ, ಕೈಯಲ್ಲಿ, ಶೇಷಛತ್ರವಿದೆ.

ಎದುರುಗಡೆಯ ತೀರ್ಥಮಂಟಪದಲ್ಲಿ ಗಣಪತಿ ಮೂರ್ತಿಯಿದ್ದು, ದೇವಾಲಯದ ಖಡ್ಗರಾವಣನ ಮತ್ತು ಬೊಬ್ಬರ್ಯನ ಹಿಂಬದಿಯಲ್ಲಿ ಪಂಜುರ್ಲಿ ಮತ್ತು ನಂದಿಗೋಣ ನಾಗಬ್ರಹ್ಮ ರಕ್ತೇಶ್ವರಿ, ಹತ್ತಿರದಲ್ಲಿ ಪಂಜುರ್ಲಿ ಗರಡಿಯೂ ಸಾನಿದ್ಯವಿದೆ. ಈ ದೇವಾಲಯಕ್ಕೂ ಸೂರಾಲಿನ ಅರಸರಿಗೂ ಅವಿನಾಭಾವ ಸಂಬಂಧವಿದೆ ಎಂಬ ಪ್ರತೀತಿ ಇದೆ.
ಇಲ್ಲಿ ತಾಳ ವಾದ್ಯವನ್ನು ಪೂಜಿಸುವ ಪ್ರತೀತಿ ಮೊದಲಿನಿಂದಲು ನಡೆದು ಬಂದಿದ್ದು, ಭೂಮಿ ಪೂಜೆ ಮಾಡಿ ಮೃತಿಕಾ ನಯನ ಅಂಕುರಾರೋಪಣ ಜರಗುತ್ತದೆ. ಪೂಜಿಸಿ ಬಿತ್ತಿದ ಬೀಜ ಉತ್ಸವದ ದಿನ ಪುಷ್ಪಿತವಾಗುತ್ತದೆ. ಬಳಿಕ ಪ್ರಧಾನ ಕಾರ್ಯ ಧ್ವಜಾರೋಹಣ ತದನಂತರ ರಂಗಪೂಜೆ, ನಾಲ್ಕನೇ ದಿನ ವಿಜೃಂಭ್ರಣೆಯ ಶ್ರೀಮನ್ಮಹಾರಥೋತ್ಸವ. ಅದೇ ದಿನ ಉತ್ಸವ ಮುಗಿದು ರಾತ್ರಿ ದೇವರನ್ನು ಪತ್ನಿ ಸಮೇತನಾಗಿ ಮಲಗಿಸುವುದೇ ಶಯನೋಲಗ, ಮರುದಿನ ವಿಜೃಂಭ್ರಣೆಯಿಂದ ಸರ್ವವಾದ್ಯಗಳಿಂದ ದೇವರನ್ನು ಎಬ್ಬಿಸುವುದು ಕವಾಟೋದ್ಘಾಟನೆ, ಅಂದು ರಾತ್ರಿ ಅಮೃತಸ್ನಾನೋತ್ಸವ, ಧ್ವಜ ಅವರೋಹಣ, ಸೇರಿದಂತೆ ಏಳು ಬಗೆಯ ಉತ್ಸವಗಳಿವೆ .
ವೈರತ್ವ ಮರೆತು ಪೆರ್ಡೂರು ಇತಿಹಾಸ ವೈರತ್ವ ವಿಲ್ಲದೆ ಸಾಮರಸ್ಯದಿಂದ ಹುಲಿ-ಹಸು ಜೊತೆಗಿದ್ದ ಸ್ಥಳವಾಗಿತ್ತು ಎಂದು ಕೆಲವು ಕಥೆಗಳಲ್ಲಿ ಉಲ್ಲೆಖಿಸುತ್ತಾರೆ. ದನ ಮೇಯಿಸುವ ಸಂದರ್ಭದಲ್ಲಿ ಕಪಿಲೆ ದನಕಾಣದೆ ಯುವಕನೋರ್ವ ಹುಡುಕಿಕೊಂಡು ಬಂದ ಸಂದರ್ಭದಲ್ಲಿ ಹುತ್ತಕ್ಕೆ ಹಾಲನ್ನು ಎರೆಯುತಿದ್ದ ಕಪಿಲೆಯನ್ನು ನೋಡಿ ಪೇರ್ ಉಂಡು ಎಂದು ಉದ್ಘರಿಸಿದನಂತೆ ನಂತರ ಪೆರ್ಡೂರು ಎಂದು ಬದಲಾಯಿತು.
ನಿತ್ಯ ಒಂಬತ್ತು ಪೂಜೆಗಳು ನೆರವೇರುತಿದ್ದು ಎಬ್ಬಿಸುವ ನಿರ್ಮಾಲ್ಯ ವಿಸರ್ಜನೆ, ಮಲಾಪಕರ್ಷಣ ಸ್ನಾನದ ಬಳಿಕ ಉಷಃಕಾಲ, ಕಲಶ, ಅಲಂಕಾರ, ಮಹಾಪೂಜಾ, ರಾತ್ರಿಪೂಜಾ, ಪೀಠಪೂಜಾ ಇವು ಪ್ರಧಾನ ಪೂಜೆಗಳು. ಸಹಸ್ರನಾಮ ಪೂಜಾ, ದೀಪ ಹಚ್ಚಿದೊಡನೆ ನಡೆಯುವ ದೀಪಪೂಜಾ ವಿಧಿ ವಿಧಾನಗಳೊಂದಿಗೆ ಇಲ್ಲಿ ನಡೆಯುತ್ತದೆ.
ಇಲ್ಲಿ ಮದುಮಕ್ಕಳ ಜಾತ್ರೆ' ವಿಶೇಷ ವಾಗಿದೆ ಸಂಕ್ರಮಣ, ಸಿಂಹ ಸಂಕ್ರಮಣ ಉತ್ಸವವು ಮದುಮಕ್ಕಳ ಜಾತ್ರೆ' ನಡೆಯುತಿದ್ದು. ಹೊಸತಾಗಿ ಮದುವೆಯಾದ ಮದುಮಗಳು ತವರಲ್ಲಿ ಆಷಾಢ ಮುಗಿಸಿ ಸೋಣ ಸಂಕ್ರಮಣದಂದು ಪತಿಯೊಂದಿಗೆ ಇಲ್ಲಿಯ ದೇವರ ದರ್ಶನಗೈದು ಗಂಡನಮನೆಗೆ ತೆರಳುವುದು ಮುಖ್ಯ.
ಬಾಳೆಹಣ್ಣಿನ ಸೇವೆ ಬಲು ಪ್ರಿಯ. ಗೊನೆಬಾಳೆ ಹಣ್ಣು, ಬುಟ್ಟಿ ಹಣ್ಣು, ಸಿಬ್ಲ ಹಣ್ಣು, 365 ಹಣ್ಣು, ಸಾವಿರ ಹಣ್ಣು ಗಳ ಸೇವೆ ನೀಡಲಾಗುತ್ತದೆ. ಚಿತ್ರ: ಪ್ರಸನ್ನ ಪೆರ್ಡೂರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.