logo
WhatsApp Image 2026-04-02 at 14.46.04.jpeg
hindalco everlast.jpeg

ಗ್ರಾಹಕರನ್ನು ದಾರಿ ತಪ್ಪಿಸುವ ಜಾಹಿರಾತು ತೆಗೆಯುವಂತೆ ಬೋರ್ನ್‌ವಿಟಾಗೆ ಕೇಂದ್ರದ ಸೂಚನೆ

ಟ್ರೆಂಡಿಂಗ್
share whatsappshare facebookshare telegram
27 Apr 2023
post image

ನವದೆಹಲಿ: ಗ್ರಾಹಕರನ್ನು ದಾರಿ ತಪ್ಪಿಸುವ ಜಾಹಿರಾತು ತೆಗೆಯುವಂತೆ ಬೋರ್ಮಿಟಾಗೆ ಕೇಂದ್ರ ಸೂಚನೆ ನೀಡಿದೆ. ಬೋರ್ನ್‌ವಿಟಾದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುವ ವರದಿ ತಿಳಿದ ನಂತರ ಕೇಂದ್ರವು ಈ ನಿರ್ಧಾರಕ್ಕೆ ಬಂದಿದೆ.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಕಂಪನಿಗೆ ಬರೆದ ಪತ್ರದಲ್ಲಿ ಕಂಪನಿಯು ತನ್ನ ಉತ್ಪನ್ನಗಳ ಮೇಲಿನ ಎಲ್ಲಾ ದಾರಿತಪ್ಪಿಸುವ ಜಾಹೀರಾತುಗಳು, ಪ್ಯಾಕೇಜಿಂಗ್ ಮತ್ತು ಲೇಬಲ್‌ಗಳನ್ನು ಹಿಂತೆಗೆದುಕೊಳ್ಳು ಬೇಕು. ಮತ್ತು ಉಲ್ಲಂಘನೆಯ ಬಗ್ಗೆ ಏಳು ದಿನಗಳಲ್ಲಿ ಆಯೋಗಕ್ಕೆ ವಿವರವಾದ ವಿವರಣೆಯನ್ನು ಕಳುಹಿಸುವಂತೆ ಕೇಳಿಕೊಂಡಿದೆ.

ಬೋರ್ಮಿಟಾ ತನ್ನ ಪ್ಯಾಕೇಜಿಂಗ್‌ನಲ್ಲಿ ಮೊಂಡೆಲೆಜ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಕಂಪನಿ ವಿಫಲವಾಗಿದೆ ಎಂದು ಆಯೋಗ ಹೇಳಿದೆ.

ಉತ್ಪನ್ನವು ಭಾರತೀಯ ನ್ಯೂಟ್ರಿಷನ್ ರೇಟಿಂಗ್ (INR) ವ್ಯವಸ್ಥೆಯನ್ನು ಉಲ್ಲಂಘಿಸಿದೆ ಎಂದು ಆಯೋಗವು ಹೇಳಿದೆ. ಬೋರ್ಮಿಟಾದಲ್ಲಿ ‘ಮಾಲ್ಟೋಡೆಕ್ಸ್‌ಟ್ರಿನ್’ ಅಥವಾ ‘ಲಿಕ್ವಿಡ್ ಗ್ಲುಕೋಸ್’ ಹಾಗೂ ಸಕ್ಕರೆ ಇದೆ ಎಂದು ಲೇಬಲ್ ಮಾಡಲಾಗಿಲ್ಲ ಎಂದು ಹೇಳಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.