



ಕಾರ್ಕಳ: ದ್ವಿಪಥ ಗೊಂಡ ರೈಲ್ವೆ ಹಳಿಗಳು , ಹೆಚ್ಚಿಸುತ್ತಿರುವ ವಿಮಾನ ನಿಲ್ದಾಣಗಳಳನ್ನು ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರವು ಪ್ರವಾಸೋದ್ಯಮ ಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.ಕರಾವಳಿಯ ರಾಷ್ಟ್ರೀಯ ಹೆದ್ದಾರಿಗಳು ಉತ್ತರ ಭಾರತ ,ಉತ್ತರ ಕರ್ನಾಟಕದ ಜೊತೆ ಸಂಪರ್ಕಿಸಲು ಸಹಕಾರಿ ಯಾಗಲಿದೆ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದರು ಅವರು ಉಡುಪಿ ತಾಲೂಕಿನ ಪೆರ್ಡೂರು ರಥ ಬೀದಿಯಲ್ಲಿ ಹೆಬ್ರಿ ಪರ್ಕಳ ಕರಾವಳಿ ಬೈಪಾಸ್ ಮಲ್ಪೆ ಸಂಪರ್ಕಿಸುವ ಎನ್ ಎಚ್ 169A ಚತುಷ್ಪಥ ಹೆದ್ದಾರಿ ರಸ್ತೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ
ದೇಶದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ಏಳು ಕಿಮೀ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಲಾಗುತಿತ್ತು ಆದರೆ ಇಂದು ಮೂವತ್ತೇಳು ಕಿಮೀ ರಸ್ತೆ ಅಗಲೀಕರಣ ವಾಗುತ್ತಿದೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗು ಸಚಿವ ನಿತಿನ್ ಗಡ್ಕರಿ ಯ ಅಭಿವೃದ್ಧಿ ಯ ಚಿಂತನೆಗಳು ಕಾರಣವಾಗಿದೆ . ಮಲೆನಾಡು ಹಾಗೂ ಕರಾವಳಿಯ ರಾಜ್ಯ ಹೆದ್ದಾರಿ ಗಳನ್ನು ರಾಷ್ಟ್ರೀಯ ಹೆದ್ದಾರಿ ಗಳನ್ನಾಗಿ ಮಾಡಲು ಕೇಂದ್ರ ಸರಕಾರವು ಒಪ್ಪಿಗೆ ನೀಡಿದೆ.
..
ಸಭೆಯಲ್ಲಿ ಶಾಸಕ ಲಾಲಾಜಿ ಮೆಂಡನ್ , ಉಡುಪಿ ಪುರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ , ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ , ಬಿಜೆಪಿ ಜಿಲ್ಲಾದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ , ಪೆರ್ಡೂರು ಗ್ರಾ.ಪಂ. ಅಧ್ಯಕ್ಷ ದೇವು ಪೂಜಾರಿ ಕೈರು , ಎನ್ ಎಚ್ ಐ ಎ ಇಂಜಿನಿಯರ್ ಗಲಾದ ನವೀನ್ , ಶಶಿಧರ್ , ಮಂಜುನಾಥ್ ನಾಯಕ್ , ಮೊದಲಾದವರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.