



ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರವೇಶ ಪ್ರಕ್ರಿಯೆ ಆ.18ರಿಂದ ಆರಂಭವಾಗಲಿದೆ.
ಮಧ್ಯಾಹ್ನ 1ರ ನಂತರ ಅಭ್ಯರ್ಥಿಗಳು ಕಾಲೇಜುಗಳನ್ನು ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಗೆ ಆಗಸ್ಟ್ 20ರಂದು ಮಧ್ಯರಾತ್ರಿ 11.59ರವರೆಗೆ ಇರುತ್ತದೆ. ಆ.19ರಿಂದ 22ರವರೆಗೆ ಆನ್‌ಲೈನ್ ಶುಲ್ಕ ಪಾವತಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿದ್ದಾರೆ.
ಆಯ್ಕೆ-1 ನಮೂದಿಸಿರುವವರು ಶುಲ್ಕ ಪಾವತಿ ಮಾಡಿ, ನಂತರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಯ್ಕೆಮಾಡಿಕೊಂಡ ಕಾಲೇಜುಗಳಿಗೆ ಪ್ರವೇಶ ಪಡೆಯಲು ಆ. 23 ಕೊನೆಯ ದಿನ. ಒಂದು ವೇಳೆ ಸಿಕ್ಕಿರುವ ಕಾಲೇಜು ಇಷ್ಟವಿಲ್ಲದೆ, ಇನ್ನೂ ಉತ್ತಮ ಕಾಲೇಜು ಬಯಸುವವರು ಆಯ್ಕೆ-2 ನಮೂದಿಸಿ, ಶುಲ್ಕ ಪಾವತಿ ಮಾಡಬೇಕು. ಇಂಥವರು ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ನೋಡಿಕೊಂಡು ಇಚ್ಛೆ ಪ್ರಕಾರ ಪ್ರವೇಶ ಪಡೆಯಬಹುದು.
ವೈದ್ಯಕೀಯ ಮತ್ತು ದಂತ ವೈದ್ಯಕೀಯದ ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಅಭ್ಯರ್ಥಿಗಳ ಆಯ್ಕೆಗೆ ಮತ್ತೆ ಅವಕಾಶಗಳು ಇರುವುದಿಲ್ಲ. ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವವರು ಎಚ್ಚರಿಕೆಯಿಂದ ‘ಆಪ್ಷನ್ ಎಂಟ್ರಿ’ ಮಾಡಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ಮೊದಲ ಸುತ್ತಿನ ಸೀಟು ಹಂಚಿಕೆ ನಂತರ 917 ವೈದ್ಯಕೀಯ ಸೀಟು ಉಳಿದಿವೆ. ಅವುಗಳಲ್ಲಿ 706 ಎನ್‌ಆರ್‌ಐ ಕೋಟಾದ ಸೀಟುಗಳು. 206 ಅಂಗವಿಕಲರ ಕೋಟಾದ ಸೀಟುಗಳು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.