



ಬೆಂಗಳೂರು, ಚೈನ್ ಲಿಂಕ್ ಸ್ಕೀಮ್ ಅಡಿಯಲ್ಲಿ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದ ಮೂವರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಮಾಸಿಕ 20 ರಷ್ಟು ಲಾಭ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತಿದ್ದರು ಎನ್ನಲಾಗಿದೆ.ಎಚ್‌ಎಸ್ಆರ್ ಲೇಔಟ್ ನಿವಾಸಿ ರಾಘವೇಂದ್ರ, ಶಿವಮೂರ್ತಿ, ನಾಗರಾಜ್ ಬಂಧಿತ ಆರೋಪಿಗಳಾಗಿದ್ದು ಪೋಮೋ ಎಕ್ಸ್ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿ ಮೂಲಕ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಬಹುದು ಎಂದು ಸಾರ್ವಜನಿಕರನ್ನು ನಂಬಿಸಿದ್ದರು. ಈ ಕುರಿತು ಯಲಹಂಕದ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಪಾಲ್ಗೊಂಡವರಿಗೆ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಪ್ರೇರಪಣೆ ಮಾಡಿದ್ದರು. ಅಲ್ಲದೇ ಒಮ್ಮೆ ಹೂಡಿಕೆ ಮಾಡಿದವರು, ಇತರರಿಂದ ಹೂಡಿಕೆ ಮಾಡಿಸಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿದ್ದರು.ಫೊಮೋ ಎಕ್ಸ್ ಕಂಪನಿಯಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಸಾರ್ವಜನಿಕರಿಗೆ ಲಾಭದ ಲೆಕ್ಕ ಕೂಡ ನೀಡಿದ್ದರು. ನೂರು ಡಾಲರ್ ಹೂಡಿಕೆ ಮಾಡಿಸಿದರೆ, ಮಾಸಿಕ ಶೇ. 10 ರಷ್ಟು ಲಾಭ, 300 ಡಾಲರ್ ಹೂಡಿಕೆ ಮಾಡಿಸಿದರೆ ಮಾಸಿಕ 11 ರಷ್ಟು ಲಾಭ, 500 ಡಾಲರ್ ಹೂಡಿಕೆ ಮಾಡಿ ಕ್ರಿಪ್ಟೋ ಕರೆನ್ಸಿ ಖರೀದಿಸಿದರೆ ಮಾಸಿಕ 12 ಪರ್ಸೆಂಟ್ ಲಾಭ, ಒಂದು ಸಾವಿರ ಡಾಲರ್ ಹೂಡಿಕೆ ಮಾಡಿಸಿದರೆ, ಶೇ. 13 ರಷ್ಟು ಲಾಭಾಂಶ ಬರಲಿದೆ ಎಂದು ನಂಬಿಸಿದ್ದರು.
ಅದರಲ್ಲೂ ಡಾಕ್ಟರ್ ಸಾಫ್ಟ್ವೇರ್ ಇಂಜಿನಿಯರ್ ಗಳನ್ನೇ ಟಾರ್ಗೆಟ್ ಮಾಡಲಾಗಿದ್ದು ಬಲೆಗೆ ಬೀಳುವಂತೆ ಮಾಡುತಿದ್ದರು.
" ನಾನು ಮೂರು ಲಕ್ಷ ಹಣ ಕಳೆದುಕೊಂಡಿದ್ದೇನೆ ಅರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ, ಹಣ ವಾಪಾಸು ಸಿಗಲಿ,ಕ್ರಿಪ್ಟೋ ಕರೆನ್ಸಿ ಹೇಳಿಕೊಂಡು ಹಣ ಪೋಲುಮಾಡಬೇಡಿ , ಡಾ. ರವೀಶ್ ಬೆಂಗಳೂರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.