



ಹೈದರಾಬಾದ್: ಚಂದ್ರಚುಂಬನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂತಿಮ ಸಿದ್ಧತೆ ಮಾಡಿಕೊಂಡಿದೆ. ಪೂರ್ವನಿಗದಿಯಂತೆ ಆಗಸ್ಟ್ 23 ರಂದು ಸಂಜೆ 6:04 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ. ಇದರ ಕಾರ್ಯಾಚರಣೆ ಸಂಜೆ 5:47 ನಿಮಿಷದಿಂದ ಆರಂಭವಾಗಲಿದೆ.
ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಮತ್ತು ಅದರಲ್ಲಿರುವ ಪ್ರಗ್ಯಾನ್ ರೋವರ್‌ನ ಆಂತರಿಕ ಪರೀಕ್ಷೆ ನಡೆಸುತ್ತಿದ್ದು, ನಿಯಮಿತ ತಪಾಸಣೆಯ ಮೂಲಕ ಸುಗಮ ನೌಕಾಯಾನ ಮುಂದುವರಿದಿದೆ. ಉಪಗ್ರಹದ ಪ್ರಮುಖ ಅಂಗ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ ಅತ್ಯುತ್ತಮ ಸ್ಥಿತಿಯಲ್ಲಿದೆ. ಲ್ಯಾಂಡಿಂಗ್ ಕಾರ್ಯಾಚರಣೆಯ ನೇರಪ್ರಸಾರ ಸಂಜೆ 5.20 ರಿಂದ ಪ್ರಾರಂಭವಾಗಲಿದೆ ಎಂದು ಇಸ್ರೋ ತನ್ನ ಸಾಮಾಜಿಕ ಜಾಲತಾಣ ಖಾತೆ ‘ಎಕ್ಸ್’ನಲ್ಲಿ ಮಾಹಿತಿ ನೀಡಿದೆ.
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ನೌಕೆಯು, 2019 ರ ಚಂದ್ರಯಾನ-2 ಮಿಷನ್ ಮುಂದುವರಿದ ಭಾಗ, ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಹತ್ತಿರಕ್ಕೆ ತೆರಳಿದ್ದು, ಕಕ್ಷೆ ಇಳಿಸುವ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದೆ. ನಾಳೆ ಸಂಜೆ ದಕ್ಷಿಣ ಧ್ರುವದ ನಿರ್ಧರಿತ ಜಾಗದಲ್ಲಿ ಇಳಿಯಲು ಸಿದ್ಧವಾಗಿದೆ. ಇದನ್ನು ಸಾಧಿಸಿದ್ದೇ ಆದಲ್ಲಿ ಉಪಗ್ರಹವೊಂದನ್ನು ದಕ್ಷಿಣ ಧ್ರುವಕ್ಕೆ ತಲುಪಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಲಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.