



ಹೆಬ್ರಿ : ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾರವರ ಆಶಯದಂತೆ ಚಾರ ಗ್ರಾಮದ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ ಕಾರ್ಯಕ್ರಮ ಚಾರ ಪಂಚಾಯತ್ ವ್ಯಾಪ್ತಿಯ ಕೊಂಡೆಜಡ್ಡು ವಾರ್ಡನ ಕರಿಯ ನಾಯ್ಕ್, ವಂಡಾರಬೆಟ್ಟು ವಾರ್ಡ್ ನ ರಾಜೇಶ್ ಪೂಜಾರಿ,ಮಂಡಾಡಿಜಡ್ಡು ವಾರ್ಡ್ ನ ಭುಜಂಗ ಶೆಟ್ಟಿ, ಗಾಂಧಿನಗರ ವಾರ್ಡ್ ನ ಕೃಷ್ಣ ನಾಯ್ಕ್ ಇವರ ಮನೆಯಲ್ಲಿ ನಡೆಯಿತು.ಕಾರ್ಕಳ ಕ್ಷೇತ್ರಾಧ್ಷರಾದ ಮಹಾವೀರ ಹೆಗ್ಗಡೆ,ಪ್ರಧಾನ ಕಾರ್ಯದರ್ಶಿ ಜಯರಾಂ ಸಾಲಿಯಾನ್ ಪಕ್ಷದ ಪ್ರಮುಖರಾದ ಗುರುದಾಸ್ ಶೆಣೈ ಭಾಗವಹಿಸಿ ಬೂತ್ ಅಧ್ಯಕ್ಷರ ಕಾರ್ಯ ಮತ್ತು ವ್ಯಾಪ್ತಿಯನ್ನು ತಿಳಿಸಿದರು ಯುವ ಮೋರ್ಚಾ ಹೆಬ್ರಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.ಹೆಬ್ರಿ ಶಕ್ತಿಕೇಂದ್ರದ ಅಧ್ಯಕ್ಷರಾದ ರಮೇಶ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್,ಗ್ರಾಮ ಸಮಿತಿಯ ಅಧ್ಯಕ್ಷರಾದ ಸೀತರಾಮ ಗಾಣಿಗ,ಪ್ರಧಾನ ಕಾರ್ಯದರ್ಶಿ ಸುನೀಲ್ ಪೂಜಾರಿ ,ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ಪ್ರಭು, ಸರ್ವ ಸದಸ್ಯರು,ಎಪಿಎಂಸಿ ಸದಸ್ಯರಾದ ಸಂಜೀವ ನಾಯ್ಕ್ ಹಿಂದುಳಿದ ಮೋರ್ಚಾ,ಯುವಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು ,ಪಕ್ಷದ ಪ್ರಮುಖರಾದ ಸುಧಾಕರ ಹೆಗ್ಡೆ,ಸಿ.ಎಂ ಪ್ರಸನ್ನ ಶೆಟ್ಟಿ ಸುರೇಶ್ ಪೂಜಾರಿ,ಕಾರ್ತಿಕ್ ಮೊಯ್ಲಿ,ಗಣೇಶ್ ಪ್ರಭು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತಿತರರು ಪಾಲ್ಗೊಂಡಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.