



ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷಮರ್ದಿನಿ ದೇವಿಯ ವಾರ್ಷಿಕ ರಥೋತ್ಸವವು ಮಾ. 7ರಂದು ಪಾಡಿಗಾರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಜರಗಿತು.
ರಥಾರೋಹಣ, ಸಾರ್ವಜನಿಕ ಅನ್ನ ಸಂತರ್ಪಣೆ, ದಾಮೋದರ ಸೇರಿಗಾರ್ ಇವರಿಂದ ಸ್ಯಾಕ್ಸೋಫೋನ್ ವಾದನ, ಮನ್ಮಹಾರಥೋತ್ಸವ, ವೈವಿಧ್ಯಮಯ ಯಕ್ಷಗಾನ ವೇಷಗಳ ಮೆರವಣಿಗೆ, ಹಚ್ಚಡ ಸೇವೆ, ಉಂಡಾರು ಚೆಂಡೆ ಬಳಗದವರಿಂದ ಚೆಂಡೆ ವಾದನ, ಕ್ರೇಜಿ ಕಿಡ್ಸ್, ಸ್ಥಳೀಯರಿಂದ ನೃತ್ಯ ವೈಭವ, ಸನ್ನಿಧಿ ಕಲಾವಿದರಿಂದ ತುಳು ನಾಟಕ ಅಪ್ಪೆ ಮಂತ್ರ ದೇವತೆ ನಡೆಯಿತು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಿ. ಶ್ರೀನಿವಾಸ ಉಪಾಧ್ಯ, ಸದಸ್ಯರಾದ ಮುರುಳೀಧರ ನಕ್ಷತ್ರಿ, ಸುಖಾನಂದ ಶೆಟ್ಟಿಗಾರ, ಸತೀಶ್ ನಾಯ್ಕ್, ಸುಗುಣ ನಾಯ್ಕ್, ಕೀರ್ತಿ ಕುಮಾರ್, ಅಕ್ಷಯ ಬಂಗೇರ, ಸತ್ಯಭಾಮ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಪಿ. ರಾಮದಾಸ ಹೆಗ್ಡೆ ಸಂಚಾಲಕರಾದ ದಿಲೀಪ್ ರಾಜ್ ಹೆಗ್ಡೆ, ಮಹೇಶ ಠಾಕೂರ್, ಅಧ್ಯಕ್ಷ ಬಿ. ಜಯರಾಜ ಹೆಗ್ಡೆ, ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅತ್ರಾಡಿ, ಕೋಶಾಧಿಕಾರಿ ಸುಮಿತ್ರಾ ಆರ್. ನಾಯಕ್, ಸಹಾಯಕ ಕೋಶಾಧಿಕಾರಿ ರವೀಂದ್ರ ಪ್ರಭು ಹಾಗೂ ದೇವಸ್ಥಾನದ ಅರ್ಚಕ ವೃಂದ, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.