



ವಾಷಿಂಗ್‌ಟನ್ : ಮಾತೇ ಇಲ್ಲದೇ ಪ್ರಪಂಚವನ್ನೇ ನಕ್ಕು ನಲಿಸಿದ ಕಾಮಿಡಿಯನ್ ಚಾರ್ಲಿ ಚಾಪ್ಲಿನ್ ಮಗಳು ಜೋಸಫೈನ್ ಹಾನ್ನಾ ಚಾಪ್ಲಿನ್ ವಿಧವಶರಾಗಿದ್ದಾರೆ. ಜೋಸಫೈನ್ ಗೆ 74 ವರ್ಷ ವಯಸ್ಸಾಗಿತ್ತು.
ಪ್ಯಾರಿಸ್‌ನಲ್ಲಿ ಜುಲೈ 13ರಂದೇ ಜೊಸೆಫೈನ್ ಮೃತರಾಗಿದ್ದು, ಈ ವಿಚಾರವನ್ನು ಅವರ ಕುಟುಂಬಸ್ಥರು ತಡವಾಗಿ ಪ್ರಟಿಸಿದ್ದಾರೆ. ಅವರ ಸಾವಿಗೆ ಕಾರಣವೇನೆಂಬುದನ್ನು ಕುಂಟುಂಬ ಬಹಿರಂಗಪಡಿಸಿಲ್ಲ. ಜೋಸಫೈನ್ ಚಾಪ್ಲಿನ್ ಗೆ ಮೂವರು ಮಕ್ಕಳು ಹಾಗೂ 7 ಮಂದಿ ಸೋದರ ಸೋದರಿಯರಿದ್ದಾರೆ.
ಚಾರ್ಲಿ ಚಾಪ್ಲಿನ್ ನಾಲ್ಕನೇ ಪತ್ನಿ ಊನಾ ಓನೀಲ್‌ನ ಮೂರನೇ ಪುತ್ರಿಯಾಗಿ 1949ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಜೋಸಫೈನ್ ಚಾಪ್ಲಿನ್, ತಂದೆಯೊಂದಿಗೆ ರಂಗಚಟುವಟಿಕೆ ಹಾಗೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ರು. ಚಾರ್ಲಿ ಚಾಪ್ಲಿನ್‌ರವರ “ಲೈಮ್‌ಲೈಟ್” ಮೂಕಿ ಚಿತ್ರದ ಮುಖಾಂತರ ಸಿನಿಮಾರಂಗ ಪ್ರವೇಶಿಸಿದ ನಟಿ “ಕ್ಯಾಂಟರ್‌ಬರಿ ಟೇಲ್ಸ್, “ಎಸ್ಕೆಪ್ ಟು ದಿ ಸನ್, “ದಿ ಬೇ ಬಾಯ್” ಸೇರಿದಂತೆ ಹಲವು ಸುಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.