



ಭಾಷೆಯಾಗಿ ಇಂಗ್ಲಿಷ್ ಕಲಿಯಿರಿ- ಡಾ. ಶೇಖರ ಅಜೆಕಾರು
ಅಜೆಕಾರು: ಇಂಗ್ಲಿಷ್ ಮಾಧ್ಯಮದ ಶಾಲೆಯಿಂದಲೇ ಸಕಲ ಸ್ವರ್ಗ ಪ್ರಾಪ್ತಿಯಾಗುವುದೆಂಬ ಹುಸಿ ವ್ಯಾಮೋಹವನ್ನು ಬಿತ್ತಲಾಗುತ್ತಿದೆ. ಭಾಷೆಯಾಗಿ ಇಂಗ್ಲಿಷ್ ಅನ್ನು ಸಮರ್ಪಕವಾಗಿ ಕಲಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅಭಿಪ್ರಾಯ ಪಟ್ಟರು.
ಅವರು ಆದಿಗ್ರಾಮೋತ್ಸವ ಸಮಿತಿ ಉಡುಪಿಯ ಶೆಫಿನ್ಸ್ ಇಂಗ್ಲಿಷ್ ಅಕಾಡೆಮಿಯ ಸಹಕಾರದೊಂದಿಗೆ ಅಜೆಕಾರಿನ ಜ್ಯೋತಿ ಹೈಸ್ಕೂಲಿನಲ್ಲಿ ಆಯೋಜಿಸಿದ್ದ "ಭಾಷೆಯಾಗಿ ಇಂಗ್ಲಿಷ್ ಕಲಿಯಿರಿ" ಸರಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರಕಾರವೇ ಕನ್ನಡ ಶಾಲೆಗಳಲ್ಲಿ ಎಲ್ ಕೆ ಜಿ -ಯುಕೆಜಿ ಸ್ಥಾಪಿಸಿ ಅಂಗನವಾಡಿಗಳನ್ನು ಜೊತೆಗೆ ನಮ್ಮ ಆಚಾರ ವಿಚಾರಗಳನ್ನು ಕೊಲ್ಲುತ್ತಿದೆ. ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಕನ್ನಡದ ಜೊತೆಗೆ ಆರಂಭಿಸಿ ತಾರತಮ್ಯ ಅನುಸರಿಸುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದರು. ಇಂಗ್ಲಿಷ್ ಅಕಾಡೆಮಿಗೆ ಕನ್ನಡದ ಶಾಲುಗಳನ್ನು ಹಸ್ತಾಂತರಿಸಿ ಮುಂಬಯಿ ಉದ್ಯಮಿ ಪಮ್ಮೊಟ್ಟು ಸುಂದರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಂಚೆ ಇಲಾಖೆಯ ನಿವೃತ್ತ ಬ್ರಾಂಚ್ ಪೊಸ್ಟ್ ಮಾಸ್ಟರ್ ಕಡ್ತಲ ಮೋಹನದಾಸ ನಾಯಕ್, ಜ್ಯೋತಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಸಿಸ್ಟರ್ ಸಗಾಯ ಸೆಲ್ವಿ, ಶೆಪಿನ್ಸ್ ಇಂಗ್ಲಿಷ್ ಅಕಾಡೆಮಿಯ ಸಂಸ್ಥಾಪಕ ಅಮೃತ ಸಮ್ಮಾನ್ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮನೋಜ್ ಕಡಬ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೆಸಿಂತಾ ಬಿ.ಎಸ್. ಮುಖ್ಯ ಅತಿಥಿಗಳಾಗಿದ್ದರು. ಅನಿಲ್ ಮತ್ತು ಶ್ರೀನಿಧಿ ತರಬೇತಿಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಯನಾ ಸ್ವಾಗತಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿ ನಾಯಕ ವಿಘ್ನೇಶ ವಂದಿಸಿದರು. ತರಬೇತಿ ಕಾರ್ಯಕ್ರಮವು ಮನೋಜ್ ಕಡಬ ಅವರ ಸಾರಥ್ಯದಲ್ಲಿ ಅರ್ಪಿತಾ ಬ್ರಹ್ಮಾವರ, ಎಜಾಜ್ ಮನ್ನಾ , ಸೃಷ್ಠಿ ಮತ್ತಿತರರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು. ವಿಜೇತ ತಂಡದವರಿಗೆ ಕನ್ನಡ ಶಾಲು ಮತ್ತು ಪುಸ್ತಕ ಕಾಣಿಕೆ ನೀಡಿ ಗೌರವಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.