logo
WhatsApp Image 2026-04-02 at 14.46.04.jpeg
hindalco everlast.jpeg

ಆನ್ಲೈನ್ ನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಕೆಮಿಕಲ್ ಸ್ಪ್ರೇ, ದೂರು ದಾಖಲು

ಟ್ರೆಂಡಿಂಗ್
share whatsappshare facebookshare telegram
26 Aug 2026
post image

ಬೆಂಗಳೂರು: ಆನ್ಲೈನ್ನಲ್ಲಿ ಮಾರಾಟ ಮಾಡುವ ತರಕಾರಿಗಳು (Online Vegetables) ತಾಜಾ ಕಾಣಬೇಕು ಅಂತ ಕೆಮಿಕಲ್ ಸ್ಪ್ರೇ ಮಾಡುವ ಬಗ್ಗೆ ದೂರುಗಳು ಕೇಳಿಬಂದಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ ಖಾದರ್ (UT Khader) ಸ್ಫೋಟಕ ಹೇಳಿಕೆ ನೀಡಿದರು. ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿದ ಅವರು, ಆನ್ಲೈನ್ನಲ್ಲಿ ಮಾರಾಟ ಮಾಡುವ ತರಕಾರಿಗಳಿಗೆ ಕೆಮಿಕಲ್ ಸ್ಪ್ರೇ ವಿಚಾರದಲ್ಲಿ ದೂರು ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದರು. ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ ಮಾಲ್ ಕಂಪನಿಗಳಲ್ಲಿ ತರಕಾರಿ ಹಾಳಗಾದಂತೆ ಕಲರ್ ಕಲರ್ ಲೈಟ್ ಹಾಕಿ ತರಕಾರಿ ಹೊಳೆಯುವ ಹಾಗೆ ಇಡ್ತಾರೆ. ಜನ ಮರುಳಾಗಿ ತೆಗೆದುಕೊಳ್ತಾರೆ ಎಂದರಲ್ಲದೇ ತರಕಾರಿ ತಾಜಾ ಕಾಣಬೇಕು ಅಂತ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ, ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ರು.

ಇನ್ನೂ ಇತ್ತೀಚೆಗೆ ಹೋಟೆಲ್ಗಳ ಮೇಲೆ ಅಧಿಕಾರಿಗಳ ದಾಳಿಯ ಕುರಿತು ಮಾತನಾಡಿ, ಮುಂದಿನ ವಾರ ಅಥವಾ 15 ದಿನದಲ್ಲಿ ಹೋಟೆಲ್ ಅಸೋಸಿಯೇಷನ್, ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ಇಂದಿರಾ ಕ್ಯಾಂಟಿನ್ ಗುತ್ತಿಗೆದಾರರ ಜೊತೆ ಸಭೆ ಮಾಡಲಿದ್ದೇವೆ. ಹೋಟೆಲ್ಗಳ ಪರಿಶೀಲನೆ ವೇಳೆ ಅನೇಕ ಲೋಪದೋಷ ಕಂಡುಬಂದಿದೆ. ಕ್ಲಬ್ನವರು ಹೋಟೆಲ್ ನವರು ಯಾವ ರೀತಿ ಆಹಾರ ತಯಾರಿಕೆ ಸುರಕ್ಷತೆ ಹಾಗೂ ಟ್ರೈನಿಂಗ್ ನೀಡುವ ಬಗ್ಗೆ ಯೋಜನೆ ರೂಪಿಸಿದ್ದೇವೆ. ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಕೂಡ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.