logo
WhatsApp Image 2026-04-02 at 14.46.04.jpeg
hindalco everlast.jpeg

ಹೆಬ್ರಿಗೆ ಇ ಎಸ್ ಐ ಆಸ್ಪತ್ರೆಗೆ ಸ್ಥಾಪಿಸಲು ಕೇಂದ್ರ ಕ್ಕೆ ಪ್ರಸ್ತಾವನೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಟ್ರೆಂಡಿಂಗ್
share whatsappshare facebookshare telegram
1 Jun 2022
post image

ಕಾರ್ಕಳ: ಹೆಬ್ರಿಗೆ ಇ ಎಸ್ ಐ ಆಸ್ಪತ್ರೆಗೆ ಸ್ಥಾಪಿಸಲು ಕೇಂದ್ರ ಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು . ಅವರು ಹೆಬ್ರಿ ತಾಲೂಕಿನ ಬಸ್ಟ್ಯಾಂಡ್ ನಿರ್ಮಿಸಲು ಶಿಲನ್ಯಾಸ ನೆರವೇರಿಸಿ ಮಾತನಾಡಿದರು...

ಕಂದಾಯ ಸಚಿವ ಆರ್ ಅಶೋಕ್ ‌ರಾಜ್ಯದಲ್ಲಿನ ಪ್ರತಿ ಮಂಗಳ ವಾರ ಜಿಲ್ಲಾಧಿಕಾರಿ ಗಳು ತಾಲೂಕು ತಾಲ್ಲೂಕು ಆಡಳಿತ ಸೌಧ ಉದ್ಘಾಟಿಸಿದ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ ಪ್ರತಿ ವಾರದ ಮಂಗಳವಾರ ಜಿಲ್ಲಾಧಿಕಾರಿ ಗಳು ಪ್ರತಿ ತಾಲೂಕಿನ ತಾಲೂಕು ಕಛೇರಿ ಯಲ್ಲಿ ಬೆ.10 ರಿಂದ. ಮಧ್ಯಾಹ್ನ 2 ರವರೆಗೆ ಭೇಟಿ ನೀಡಿ , ಪರಿಶೀಲನೆ ನಡೆಸಬೇಕು. ಮಧ್ಯವರ್ತಿಗಳ ಹಾವಳಿಯನ್ನುತಡೆಗಟ್ಟುವ ಸಲುವಾಗಿ ಹಾಗೂ ಆಡಳಿತ ಯಂತ್ರ ಚುರುಕುಗೊಳಿಸಲು ಸರಕಾರದ ಸೌಲಭ್ಯಗಳನ್ನು ವೇಗವಾಗಿ ತಲುಪಿಸಲು ಸಹಕಾರಿ ಯಾಗಲಿದೆ ಎಂದು ಸಚಿವರು ತಿಳಿಸಿದರು. ಅವರು ಹೆಬ್ರಿ ಯಲ್ಲಿ ತಾಲೂಕು ಆಡಳಿತ ಸೌಧ ಉದ್ಘಾಟಿಸಿ ಮಾತನಾಡಿದರು

ಗೋಪಾಲ್ ಭಂಡಾರಿ, ವೀರಪ್ಪ ಮೊಯಿಲಿಯನ್ಮು ಯನ್ನು ಸ್ಮರಿಸಿದ ಸುನಿಲ್: ಹೆಬ್ರಿ ತಾಲೂಕು ಹೋರಾಟದಲ್ಲಿ ಗೋಪಾಲ್ ಭಂಡಾರಿ ಸುಭೋದ್ ಬಳ್ಳಾಲ್ ,ಭಾಸ್ಕರ್ ಜೋಯಿಸ್ ,ಸಂಜೀವ ಶೆಟ್ಟಿ , ದಿನೇಶ್ ಪೈ ಸೇರಿದಂತೆ ಅನೇಕ ಹೋರಾಟಗಳು ನಡೆದಿದ್ದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ನಿರಂತರ ಒತ್ತಡದ ಹಾಕುತಿದ್ದರು ಎಂದು ಸಚಿವರು ತಿಳಿಸಿದರು.

ಹೆಬ್ರಿ ಪೇಟೆಯ ಸಮೀಪದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತವಾದ ಬಸ್ ನಿಲ್ದಾಣ ಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಿದರು. ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ತರಗತಿ ಕೊಠಡಿಗಳಿಗೆ ನೂತನ ಹೆಬ್ರಿ ತಾಲ್ಲೂಕಿನ ಆಡಳಿತ ಸೌಧದಿಂದ ರಿಮೋಟ್ ಮೂಲಕ ಚಾಲನೆ ನೀಡಲಾಯಿತು. ಆಡಳಿತ ಸೌಧದ ಗುತ್ತಿಗೆದಾರ ಕಾಪು ವಾಸುದೇವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹೆಬ್ರಿಯ ಅರ್ಚಕ ವೇದಮೂರ್ತಿ ನಾಗರಾಜ ಜೋಯಿಸ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಸಚಿವ ಎಸ್. ಅಂಗಾರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ, ವಸತಿ ಸಚಿವ ವಿ.ಸೋಮಣ್ಣ, ತೋಟಗಾರಿಕೆ ಸಚಿವ ಎನ್.ಮುನಿರತ್ನ,ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ, ವಿವಿಧ ಕ್ಷೇತ್ರಗಳ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು, ಕಂದಾಯ, ಕಾಲೇಜು ಶಿಕ್ಷಣ ಇಲಾಖೆ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು, ವಿವಿಧ ಗಣ್ಯರು ಉಪಸ್ಥಿತರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.