



ಪೆರ್ಡೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್ ಸಂಘಟನೆಯಿಂದ ಬಂದವರಲ್ಲ. ಬಿಜೆಪಿಗೆ ಬೇಕಾಗಿರುವುದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ತರಹದ ನಾಯಕರು. ಹಾಗಾಗಿ ಬೊಮ್ಮಾಯಿ ಅವರು ಸಿಎಂ ಹುದ್ದೆಯಲ್ಲಿ ಎಷ್ಟು ದಿನ ಮುಂದುವರಿಯುತ್ತಾರೆ ಎಂದು ಹೇಳುವುದು ಕಷ್ಟ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಬೊಮ್ಮಾಯಿ ಅವರ ಜಾತ್ಯತೀತ ಮನೋಭಾವವನ್ನು ಬಿಜೆಪಿ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮೂಲತಃ ಜನತಾ ದಳದಿಂದ ಬಂದ ಅವರು ಒಂದು ಸಂದರ್ಭದಲ್ಲಿ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದರು. ಅವರ ತಂದೆ ಜನತಾ ದಳದ ನಾಯಕರು ಎಂದು ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು ನುಡಿದರು.
ಧರ್ಮ- ದೇವರ ಬಗ್ಗೆ ಇತರರಿಗೆ ಪಾಠ ಹೇಳುವ ಬಿಜೆಪಿಯು ಮೈಸೂರಿನ ನಂಜನಗೂಡಿನಲ್ಲಿ ದೇವಾಲಯವನ್ನು ಧ್ವಂಸಗೊಳಿಸಿದೆ. ಸರಕಾರ ಹೇಳದೆ ಯಾವುದಾದರು ಅಧಿಕಾರಿಗಳು ದೇಗುಲ ಒಡೆಯಲು ಸಾಧ್ಯವೇ ಎಂದು ಸೊರಕೆ ಪ್ರಶ್ನಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.