



ಚಂದ್ರಶೇಖರ್ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಬಾಲ್ಯ ಎಂದರೆ ಅದನ್ನು ಸುಂದರ ಪ್ರಪಂಚ ಅದನ್ನು ವರ್ಣಿಸಲು ಪದಗಳೇ ಇಲ್ಲ ಎಲ್ಲರ ಜೀವನದಲ್ಲಿಯೂ ಬಾಲ್ಯದ ನೆನಪು ಎನ್ನುವುದು ಕಟ್ಟಿಟ್ಟ ಬುತ್ತಿ ಅದೊಂದು ಜೀವನದ ಸಂತೋಷದ ಘಟ್ಟ ಎಂದರೆ ತಪ್ಪಾಗಲಾಗದು ಹಾಗೆಯೇ ಎಲ್ಲರ ಜೀವನದಲ್ಲಿ ಬಾಲ್ಯ ಎಂದರೆ ಸುಖ ಸಂತೋಷ ಸಂಭ್ರಮದ ದಿನಗಳಾಗಿಯೇ ಇತ್ತು ಆದರೆ ಈಗ ಅವೆಲ್ಲ ಕಣ್ಮರೆಯಾಗುತ್ತಿದೆ ಏಕೆಂದರೆ ಪ್ರಪಂಚವೇ ಸ್ವಾರ್ಥದ ಬೆನ್ನೆಲು ಸಾಗುತ್ತಿರುವುದರಿಂದ ಎಲ್ಲರು ಸ್ವಾರ್ಥಿಗಳಾಗಿ ಬದುಕುತ್ತಿದ್ದಾರೆ ಬಾಲ್ಯದಲ್ಲಿ ಹಾಡಿದ ಆಟ ಮಾಡಿದ ತುಂಟಾಟ ಈಗ ನೆನಪಿಸಿಕೊಂಡರೆ ಬಾಲ್ಯ ಮತ್ತೆ ಮರುಕಳಿಸಲಿ ಎನ್ನುವಂತಾಗುತ್ತದೆ ಆಗ ಯಾವುದೇ ದ್ವೇಷ ಕಲ್ಮಶಗಳಿಲ್ಲದ ಜೀವನ ವಾಗಿದ್ದರಿಂದ ಯಾವುದೇ ತಪ್ಪು ಸರಿಯನ್ನು ಭಾವನೆ ಇಲ್ಲದಿದ್ದರೂ ನೆಮ್ಮದಿಯ ಜೀವನ ಒಂದಿತ್ತು ಏನು ಗೊತ್ತಿಲ್ಲದ ಸಂದರ್ಭ ಆ ನೆಮ್ಮದಿ ಎಲ್ಲಾ ತಿಳಿದಿದೆ ಏನು ಅಷ್ಟರಲ್ಲಿ ಕಾಣೆಯಾಗಿದೆ ಬಾಲ್ಯದ ದಿನಗಳು ನಮ್ಮ ಜೀವನದಲ್ಲಿ ಅತ್ಯಮೂಲ್ಯ ಕ್ಷಣಗಳಾಗಿದ್ದವು ನಾವು ಸಣ್ಣವಾಗಿದ್ದ ಕಾಡಿದ ಆಟ ಮಾಡಿದ ಕೀಟಲೆ ಎಲ್ಲ ಈಗ ಕಣ್ಮರೆಯಾಗುತ್ತಿದೆ ಏಕೆಂದರೆ ಈಗ ಎಲ್ಲರು ಮಕ್ಕಳನ್ನು ವಾಹನಗಳ ಮೂಲಕವೇ ಶಾಲೆಗೆ ಬಿಟ್ಟು ಬರುವ ಪರಿಸ್ಥಿತಿ ಬಂದಿದೆ ಆದರೆ ನಾವು ದಿನ ಬೆಳಿಗ್ಗೆ ಎದ್ದು ತಮ್ಮ ಗೆಳೆಯರೊಂದಿಗೆ ಗುಡ್ಡಗಾಡುಗಳಲ್ಲಿ ಆಟ ಆಡಿಕೊಂಡು ಶಾಲೆಗೆ ಹೋಗುತ್ತಿದ್ದೇವೆ ಅವೆಲ್ಲವೂ ಈಗ ಕೇವಲ ನೆನಪುಗಳಷ್ಟೇ ಆಗಿ ಉಳಿದಿದೆ ಆ ಶಾಲೆಯ ದಿನಗಳು ರಜೆಯ ದಿನಗಳು ಆಟ ಆಡಿದ ಸಮಯ ಮಾಡಿದ ತರಾಟೆ ಹಾಗೆಯೇ ಎಳೆ ವಯಸ್ಸಿನ ಫೋಟೋಗಳನ್ನೆಲ್ಲ ನೋಡಿದಾಗ ನಾವು ಇನ್ನು ಚಿಕ್ಕ ಮಕ್ಕಳಾಗಿಯೇ ಉಳಿಯಬೇಕಾಗಿತ್ತು ಎನ್ನುವ ಭಾವನೆ ಮೂಡುತ್ತದೆ. ಚಿಕ್ಕ ವಯಸ್ಸಿನಲ್ಲಿ ನಾವು ಒಮ್ಮೆ ದೊಡ್ಡವರಾದರೆ ಸಾಕು ದೊಡ್ಡವರಿಗೆಲ್ಲ ಯಾವುದೇ ತೊಂದರೆ ಇಲ್ಲ ಸಂತೋಷದಿಂದಿರುಬಹುದು ಎನ್ನುವ ಭಾವನೆ ಇತ್ತು ಆದರೆ ಈಗ ನೋಡಿದರೆ ಬಾಲ್ಯವೇ ಒಳ್ಳೆಯದಿತ್ತು ಎನ್ನುವಂತಾಗುತ್ತದೆ ಏನು ಗೊತ್ತಿಲ್ಲದ ವಯಸ್ಸಿನಲ್ಲಿ ಏನು ಮಾಡಿದರೂ ಚಂದವೇ ಇತ್ತು ಆದರೆ ಈಗ ಯಾವುದು ಇದ್ದರು ನೆಮ್ಮದಿಯುತವಾದ ಜೀವನ ಸಾಗಿಸಲು ಅಸಾಧ್ಯ ದ್ವೇಷ ಅಸೂಹೆ ಕಲ್ಮಶಗಳಿಲ್ಲದ ಆ ದಿನಗಳೇ ನೆನಪುಗಳಾಗಿ ಉಳಿದಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.