



ಹೆಬ್ರಿ : ಪಿ ಆರ್ ಎನ್ ಅಮೃತಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಿಲ್ಲಾಳಿಯ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ನ.15ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಗೋವುಗಳಿಗೆ ವಿಶೇಷ ಪೂಜೆ ನೆರವೇರಿಸಿ, ವಿದ್ಯಾರ್ಥಿಗಳು ಎಲ್ಲಾ ಗೋವುಗಳಿಗೆ ಗೋಗ್ರಾಸ ನೀಡಿದರು. ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ ಮಾತನಾಡಿ, ನಮ್ಮ ದೇಶದ ಸಂಪತ್ತು ಗೋವುಗಳು. ಅವುಗಳನ್ನು ರಕ್ಷಣೆ ಮಾಡುವ ದೀಕ್ಷೆ ನಮ್ಮದಾಗಬೇಕು. ಅಲ್ಲದೆ ಜೀವನದಲ್ಲಿ ಎಲ್ಲಾ ಅಮೃತಕ್ಕೆ ಸಮಾನವಾದ ವಸ್ತು ನೀಡುವುದೇ ಕಾಮಧೇನು ಎಂದು ಆಶಿಸಿದರು .ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರಾದ ಸಿಎ ಎಂ ರವಿರಾವ್, ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಸದಸ್ಯರಾದ ವಿಷ್ಣುಮೂರ್ತಿ ನಾಯಕ್, ಗಣೇಶ್ ಕಿಣಿ, ಲಕ್ಷ್ಮಣ್ ಭಟ್, ಗೋಶಾಲಾ ಟ್ರಸ್ಟ್ ನ ವಿದ್ವಾನ್ ಪದ್ಮನಾಭ ಆಚಾರ್ಯ, ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ, ಗೋಶಾಲೆಯ ಮೇಲ್ವಿಚಾರಕ ಸುಬ್ರಹ್ಮಣ್ಯ, ಶಾಲಾ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಉಪಸ್ಥಿತರಿದ್ದರು. ಗುರೂಜಿ ಮಾತಾಜಿಯವರು ವಿವಿಧ ಮನೋರಂಜನಾ ಕಾರ್ಯಕ್ರಮ ನಿರ್ವಹಿಸಿ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡಿ, ಸಿಹಿ ತಿಂಡಿಯ ಪ್ರಾಯೋಜಕತ್ವವನ್ನು ಡಾ ಭಾರ್ಗವಿ ಐತಾಳ್ ಮತ್ತು ಸಾವಿತ್ರಿ ಕಿಣಿ ಹಾಗೂ ಬಹುಮಾನದ ಪ್ರಾಯೋಜಕತ್ವವನ್ನು ಶಿವಾನಂದ ಕಾಮತ್ ವಹಿಸಿದ್ದರು.ಈ ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.