



ಚಿತ್ರದುರ್ಗ ; ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಘಟನೆಯಲ್ಲಿ ಬಾಲಕಿಯೇ ನಾಲ್ವರ ಸಾವಿಗೆ ಕಾರಣವಾಗಿದ್ದಾಳೆ . ಘಟನೆ ಸಂಬಂಧ ತನಿಖೆಗೆ ಸಂಬಂಧಫಟ್ಟಂತೆ ಪೋಲಿಸರು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಅಂದು ಮನೆಯಲ್ಲಿ ಮಾಡಿದ್ದ ಅಡುಗೆಯನ್ನು ಕಳುಹಿಸಿದ್ದರು, ಪ್ರಯೋಗಾಲಯದ ವರದಿ ಬಂದಿದ್ದು, ಮುದ್ದೆಗೆ , ಬಾಲಕಿಯೇ ವಿಷಬೆರೆಸಿದ್ದಾಳೆ ಎನ್ನಲಾಗಿದೆ. ನಡುವೆ ನಾಲ್ವರನ್ನು ಯುವತಿ ಸಾಯಿಸಲು ಪ್ರಮುಖ ಕಾರಣ, ನನ್ನ ಪೋಷಕರು ನನ್ನ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು, ಇದಲ್ಲದೇ ನನಗೆ ಬೈಯುತ್ತಿದ್ದರು, ಇದರಿಂದ ನಾನು ಮನನೊಂದು ಮುದ್ದೆಗೆ ವಿಷಬೆರೆಸಿ ನಾಲ್ವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ ಅಂತ ಭರಮಸಾಗರ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮುಂದೆ ಕಾನೂನು ಕ್ರಮ ಕೈಗೊಳ್ಳಾಗುವುದು ಅಂತ ತಿಳಿಸಿದ್ದಾರೆ. ಯುವತಿ ಹಾಕಿದ್ದ ವಿಷದ ಮುದ್ದೆ ತಿಂದು, ತಂದೆ ತಿಪ್ಪಾನಾಯ್ಕ್(46), ತಾಯಿ ಸುಧಾಬಾಯಿ(43), ಸಹೋದರಿ ರಮ್ಯ(16), ವೃದ್ಧೆ ಗುಂಡಿಬಾಯಿ(75) ಸಾವಿಗೀಡಾದ್ದರು. ಇದೇ ವೇಳೇ ಬಾಲಕಿಯ ತಮ್ಮ ರಾಹುಲ್(18) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ. ಇನ್ನೂ ಘಟನೆ ಪಡೆದ ಬಳಿಕ ಬಾಲಕಿಯನ್ನು ನಡೆದು ಕೊಂಡ ರೀತಿಯನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದ ವೇಳೆಯಲ್ಲಿ ಘಟನೆ ಸಂಬಂಧ ಎಲ್ಲಾ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.