



ಕಾರ್ಕಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರಕಾರ ಹಾಗೂ ಸರಕಾರಿ ಪ್ರೌಢಶಾಲೆ ಕೂಡುಬೆಟ್ಟು ಮಾಳ ಇವರ ವತಿಯಿಂದ ಬಜಗೋಳಿಯಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಟ್ಟು ಹತ್ತು ವಿದ್ಯಾರ್ಥಿಗಳು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಂಟನೇ ತರಗತಿಯ ಕಾರ್ತಿಕ್ ಪೂಜಾರಿ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನ, ಹದಿನಾಲ್ಕರ ಒಳಗಿನ ವಯೋಮಿತಿಯ ೪ಘಿ೧೦೦ ರಿಲೇಯಲ್ಲಿ ಎಂಟನೇ ತರಗತಿಯ ಕಾರ್ತಿಕ್ ಪೂಜಾರಿ, ಶ್ರೇಯಸ್ ದೇವಾಡಿಗ, ಸಂಗಮ್, ನಿತೇಶ್ ಕುಮಾರ್ ಪ್ರಥಮ ಸ್ಥಾನ, ಹತ್ತನೇ ತರಗತಿಯ ಆಶೀಶ್ ಮಸ್ಕರೇನ್ಹಸ್ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, ೧೭ ವರ್ಷದ ಒಳಗಿನ ವಯೋಮಿತಿಯ ೪ಘಿ೧೦೦ ರಿಲೇಯಲ್ಲಿ ಹತ್ತನೇ ತರಗತಿಯ ಸ್ವಸ್ತಿಕ್, ಶಾರ್ವಿನ್ ಡಿ’ಸೋಜ, ಮೊಹಮ್ಮದ್ ತೌಫೀಕ್ ಹಾಗೂ ಒಂಬತ್ತನೇ ತರಗತಿಯ ಕೀರ್ತನ್ ಡಿ’ಸೋಜ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಎಂಟನೇ ತರಗತಿಯ ಶೇಕ್ ಮೊಹಮ್ಮದ್ ಮುಝಾಮಿಲ್ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ, ಸಾಂಚಿ ರಾವ್ ೨೦೦ಮೀ ಓಟ ತೃತೀಯ ಸ್ಥಾನ, ೧೦೦ ಮೀ ಓಟದಲ್ಲಿ ಒಂಬತ್ತನೇ ತರಗತಿಯ ಸುದೀಕ್ಷಾ ತೃತೀಯ ಸ್ಥಾನ, ಒಂಬತ್ತನೇ ತರಗತಿಯ ಕೀರ್ತನ್ ಡಿ’ಸೋಜ ೨೦೦ ಮೀ ಓಟ ತೃತೀಯ ಸ್ಥಾನ, ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಸ್ವಸ್ತಿಕ್ ೧೦೦ ಮೀ ಓಟ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.