logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಸ್ನೇಹಾಲಯದಲ್ಲಿ ನಿವಾಸಿಗಳು ಮತ್ತು ಸಿಬ್ಬಂದಿಗಳಿಂದ ಕ್ರಿಸ್‍ಮಸ್ ಹಬ್ಬದ ಸಂಭ್ರಮ

ಟ್ರೆಂಡಿಂಗ್
share whatsappshare facebookshare telegram
25 Dec 2023
post image

ಮಂಜೇಶ್ವರ: ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ -ಸಾಮಾಜಿಕ ಪುನರ್ವಸತಿ ಕೇಂದ್ರವು ಡಿಸೆಂಬರ್ 21ರಂದು ತನ್ನ ನಿವಾಸಿಗಳಿಗೆ ಕ್ರಿಸ್‍ಮಸ್ ಆಚರಣೆಯನ್ನು ಏರ್ಪಡಿಸಿತ್ತು.

ನಿವಾಸಿಗಳು ಮತ್ತು ಸಿಬ್ಬಂದಿ ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ಮತ್ತು ನಿವಾಸಿಗಳು ಪ್ರದರ್ಶಿಸಿದ ಆಕರ್ಷಕ ಕ್ರಿಸ್ಮಸ್ ಸ್ಕಿಟ್‍ನೊಂದಿಗೆ ಆಚರಣೆಯು ಪ್ರಾರಂಭವಾಯಿತು.

ಕ್ರಿಸ್‍ಮಸ್ ಕ್ಯಾರೋಲ್‍ಗಳಿಗೆ ಹೆಸರುವಾಸಿಯಾದ ತಂಡ ‘ಜಿಜಿ 100’ದಿಂದ ಮಧುರವಾದ ಕ್ರಿಸ್‍ಮಸ್ ಗೀತೆಗಳನ್ನು ಸಾದರಪಡಿಸಲಾಯಿತು. ಅದರಂತೆಯೇ ಅರ್ಬನ್ ಗ್ರೂವ್ ತಮ್ಮ ಶಕ್ತಿಯುತ ಮತ್ತು ಆಕರ್ಷಕ ನೃತ್ಯ ಪ್ರದರ್ಶನಗಳೊಂದಿಗೆ ಹಬ್ಬದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. ಹಿಪ್-ಹಾಪ್, ಸಮಕಾಲೀನ ಮತ್ತು ಜಾಝ್ ನೃತ್ಯವಿಧಗಳನ್ನು ಬೆಸೆಯುವ ಅವರ ವಿಶಿಷ್ಟ ನೃತ್ಯ ಸಂಯೋಜನೆಯು ಪ್ರೇಕ್ಷಕರ ಮನರಂಜಿಸಿತು.

ಈ ಸಂದರ್ಭದಲ್ಲಿ ಸ್ವಯಂಸೇವಕರು ಮತ್ತು ದಾನಿಗಳು ಉದಾರವಾಗಿ ಉಡುಗೊರೆಗಳು ಮತ್ತು ಆರ್ಥಿಕ ಬೆಂಬಲವನ್ನು ನೀಡಿದ್ದರು.

“ಕ್ರಿಸ್ಮಸ್ ಹಬ್ಬಗಳು ನಮ್ಮ ನಿವಾಸಿಗಳ ಭಾವನಾತ್ಮಕ ಯೋಗಕ್ಷೇಮವನ್ನು ಬಲಪಡಿಸಲು ಅವಕಾಶವನ್ನು ನೀಡುತ್ತವೆ, ಇವು ತಮ್ಮ ಜೀವನವನ್ನು ನವೀಕೃತ ಭರವಸೆಯೊಂದಿಗೆ ಪುನರ್ನಿರ್ಮಿಸಲು ಸಹಾಯ ಮಾಡುತ್ತವೆ ಮತ್ತು ಇದು ನಮಗೆ ಸಂತೋಷವನ್ನು ನೀಡುತ್ತದೆ”, ಎಂದು ಕೇಂದ್ರದ ನಿರ್ದೇಶಕರಾದ ಶ್ರೀ ಜೋಸೆಫ್ ಕ್ರಾಸ್ತಾರವರು ನುಡಿದರು.

ಕಾರ್ಯಕ್ರಮದಲ್ಲಿ ಶ್ರೀ ರಶೀದ್ ವಿಟ್ಲ, ಸ್ಥಾಪಕರು, ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು; ಶ್ರೀ ಯೋಗೀಶ್ ವಿ. ಸಾಲಿಯಾನ್, ಮಾಲಿಕರು, ಅಮ್ಮಾ ಎಲೆಕ್ಟ್ರಾನಿಕ್ಸ್ ತೊಕ್ಕೊಟ್ಟು ಮತ್ತು ಶ್ರೀ ಟೈಟಸ್ ನೊರೊನ್ಹಾ, ಮಾಲಿಕರು, ರಾಹುಲ್ ಜಾಹೀರಾತು ಸಂಸ್ಥೆ, ಮಂಗಳೂರು ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಶ್ರೀಮತಿ ಜಿಯಾನ್ ಲವಿನಾ ಮೊಂತೇರೊ, ಅಧ್ಯಕ್ಷರು, ಮಂಜೇಶ್ವರಂ ಗ್ರಾಮ ಪಂಚಾಯತ್; ಶ್ರೀ ಸ್ಟ್ಯಾನಿ ಬೆಳಾ, ನಿರ್ಮಾಣ ನಿರ್ದೇಶಕರು, ದಾಯ್ಜಿವಲ್ರ್ಡ್ ಟಿವಿ; ರೆ. ಸಿರಿಲ್ ಡಿಸೋಜಾ, ಸ್ನೇಹಾಲಯದ ಚಾಪ್ಲಿನ್; ಶ್ರೀ ಸ್ಟ್ಯಾನಿ ಫೆರ್ನಾಂಡಿಸ್ ಮತ್ತು ಶ್ರೀಮತಿ ವಿದ್ಯಾ ಫೆರ್ನಾಂಡಿಸ್, ಬಾಹ್ರೇಯ್ನ್, ಶ್ರೀ ವಿನ್ಸೆಂಟ್ ಜೆರೋಮ್ ಡಿಸಿಲ್ವಾ ಮತ್ತು ಶ್ರೀಮತಿ ಸಿಲ್ವಿಯಾ ರೀಟಾ ಡಿಸಿಲ್ವಾ ಹಾಗೂ ಶ್ರೀ ಡೆನ್ಜಿಲ್ ಮೊನಿಸ್ ಮತ್ತು ಶ್ರೀಮತಿ ಮರಿಟಾ ಮೊನಿಸ್ (ಕುವೇಯ್ಟ್) ಉಪಸ್ಥಿತರಿದ್ದರು.

ಆಚರಣೆಗಳು ಮುಕ್ತಾಯಗೊಳ್ಳುತ್ತಿದ್ದಂತೆ, ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮತ್ತು ನಿರಂತರ ಬೆಂಬಲದೊಂದಿಗೆ, ಕ್ರಿಸ್‍ಮಸ್ ಸಮಯದಲ್ಲಿ ಮಾತ್ರವಲ್ಲದೆ ವರ್ಷವಿಡೀ ನಿವಾಸಿಗಳ ಜೀವನವನ್ನು ನಡೆಸಲು ಅಗತ್ಯವಾದ ಆರೈಕೆ ಮತ್ತು ಪುನರ್ವಸತಿಯನ್ನು ಒದಗಿಸಲು ಸಹಕರಿಸಿದ ಎಲ್ಲಾ ಕೊಡುಗೆದಾರರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿತು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.