logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಸಿನಿಮಾ ಮಾಧ್ಯಮ ಸಮೂಹ ಸಂವಹನ ಮಾಧ್ಯಮಗಳಲ್ಲಿ ಅತ್ಯಂತ ಶಕ್ತಿಶಾಲಿಯಾದುದು - ಪ್ರೊ ಶಿವಕುಮಾರ್

ಟ್ರೆಂಡಿಂಗ್
share whatsappshare facebookshare telegram
29 Sept 2023
post image

ಕಾರ್ಕಳ: ಸಿನಿಮಾ ಮಾಧ್ಯಮ ಸಮೂಹ ಸಂವಹನ ಮಾಧ್ಯಮಗಳಲ್ಲಿ ಅತ್ಯಂತ ಶಕ್ತಿಶಾಲಿಯಾದುದು. ಒಂದು ಕಾದಂಬರಿ, ಕಥೆ ನಿರ್ದೇಶಕನ ಕೈಚಳಕದಲ್ಲಿ ಮೂರುಗಂಟೆಯಲ್ಲಿ ಬೆಳ್ಳಿಪರದೆಯಲ್ಲಿ ಅನಾವರಣಗೊಳ್ಳುತ್ತದೆ ಮಾತ್ರವಲ್ಲ ಸಾಹಿತ್ಯಕೃತಿಯೊಂದರ ಜನಪ್ರಿಯತೆ ಹೆಚ್ಚಳವಾಗುವುದಕ್ಕೂ ಕಾರಣವಾಗುತ್ತದೆ. ಆದರೆ ಸಮಾಜದಲ್ಲಿ ಸಿನಿಮಾ ಸಾಹಿತಿಗಳನ್ನು ಸಾಹಿತ್ಯದ ಮುಖ್ಯ ಪರಿಧಿಯಲ್ಲಿ ಕಾಣದಿರುವುದು ವಿಷಾದನೀಯ ಅಂಶ. ಕೇವಲ ಚಿತ್ರಸಾಹಿತಿಗಳೆಂದು ಗುರುತಿಸಲ್ಪಡುತ್ತಾರೆ. ಅವರ ಭಾಷೆ, ಭಾವನೆಗಳು ಆಯಾ ಕಾಲಕ್ಕೆ ತಕ್ಕಂತೆ ಸ್ಪಂದಿಸಿ ಅತ್ಯುತ್ತಮ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾದರು. ಕನ್ನಡದ ಸಂದರ್ಭದಲ್ಲಿ ಚಿ. ಉದಯಶಂಕರ್, ದೊಡ್ಡರಂಗೇಗೌಡ ಮುಂತಾದವರು ಚಿತ್ರಸಾಹಿತ್ಯವನ್ನು ಬೆಳೆಸಿದವರಲ್ಲಿ ಅಗ್ರಗಣ್ಯರು. ಕನ್ನಡ ಚಿತ್ರರಂಗ ಆರಂಭದಿಂದನೇ ಪ್ರಯೋಗಶೀಲತೆಯನ್ನು ಬೆಳೆಸಿಕೊಂಡು ಬಂದಿದ್ದು, ಬಂಗಾರದ ಮನುಷ್ಯ ಸಿನಿಮಾ ಅದುವರೆಗಿನ ಏಕತಾನತೆಯನ್ನು ಮುರಿದು ಜನಪ್ರಿಯತೆಯನ್ನು ಗಳಿಸಿದ ಸಿನಿಮಾ ಎಂಬುದಾಗಿ ಶ್ರೀ ಭುವನೇಂದ್ರ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಶಿವಕುಮಾರ್ ಅವರು ಹೇಳಿದರು.

ಅವರು ಕಾಲೇಜಿನ ಸಾಹಿತ್ಯ ಸಂಘದ ವಾರದ ಕಾರ್ಯಕ್ರಮದಡಿಯಲ್ಲಿ ‘ಕನ್ನಡ ಸಿನಿಮಾ ಮತ್ತು ಸಾಹಿತ್ಯ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಕಾಲೇಜಿನ ತೃತೀಯ ಬಿ.ಎಸ್ಸಿಯ ವಿದ್ಯಾರ್ಥಿ ಗಣೇಶ್ ಬಿ.ಸಿ ಯವರು ‘ತೇಜಸ್ವಿಯವರ ಸಾಹಿತ್ಯ’ ಎಂಬ ವಿಷಯದಲ್ಲಿ ಪೂಚಂತೇ ಅವರ ಪರಿಸರದ ಕಥೆಗಳು, ಕಾದಂಬರಿಗಳ ಅವಲೋಕನ ಮಾಡಿದರು. ಸನ್ನಿಧಿ ಪ್ರಥಮ ಬಿ.ಕಾಂ ಅವರು ವಾರದ ಭಾವಗಾಯನ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ.ಕೋಟ್ಯಾನ್ ವಹಿಸಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ಸಾಹಿತ್ಯ ಸಂಘದ ಸಂಯೋಜಕರಾದ ಡಾ.ಅರುಣಕುಮಾರ ಎಸ್. ಆರ್ ಹಾಗೂ ಸಂಘದ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಶ್ರೀನಿಧಿ ಶೆಟ್ಟಿ, ಪ್ರಮೋದಿನಿ ಉಪಸ್ಥಿತರಿದ್ದರು. ವಿಯೋಲಾ ದ್ವಿತೀಯ ಬಿ.ಎ. ಸ್ವಾಗತಿಸಿ, ಹಿತಾ ಪ್ರಥಮ ಬಿ.ಸಿ.ಎ ವಂದಿಸಿದರು. ಗೌತಮ ಶೆಟ್ಟಿ ದ್ವಿತೀಯ ಬಿ.ಬಿ.ಎ. ಕಾರ್ಯಕ್ರಮ ನಿರೂಪಿಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.